ವಿಷಯಕ್ಕೆ ಹೋಗು

ಕಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಪ್ಪ ಎಂದರೆ ಗೌರವದ ಸಂಕೇತವಾಗಿ, ಅಥವಾ ಹಲವುವೇಳೆ ಐತಿಹಾಸಿಕ ಸಂದರ್ಭಗಳಲ್ಲಿ ಸಾಮಾನ್ಯವಾಗಿದ್ದ ಶರಣಾಗತಿ ಅಥವಾ ಸ್ವಾಮಿನಿಷ್ಠೆಯ ಸಂಕೇತವಾಗಿ ಹಲವುವೇಳೆ ವಸ್ತು ರೂಪದಲ್ಲಿ ಒಂದು ಪಕ್ಷವು ಮತ್ತೊಂದು ಪಕ್ಷಕ್ಕೆ ನೀಡುವ ಸಂಪತ್ತು. ವಿವಿಧ ಪ್ರಾಚೀನ ರಾಜ್ಯಗಳು ಒಂದು ರಾಜ್ಯವನ್ನು ಜಯಿಸಿದಾಗ ಅಥವಾ ಜಯಿಸುತ್ತೇವೆಂದು ಬೆದರಿಸಿದಾಗ ಅಲ್ಲಿಯ ಆಡಳಿತಗಾರರಿಂದ ಕಪ್ಪವನ್ನು ವಸೂಲು ಮಾಡಿಕೊಳ್ಳುತ್ತಿದ್ದವು. ಮೈತ್ರಿಗಳ ವಿಷಯದಲ್ಲಿ, ಕಿರಿಯ ಪಕ್ಷಗಳು ಹೆಚ್ಚು ಪ್ರಬಲ ಪಕ್ಷಗಳಿಗೆ ಸ್ವಾಮಿನಿಷ್ಠೆಯ ಸಂಕೇತವಾಗಿ ಮತ್ತು ಹಲವುವೇಳೆ ಎರಡೂ ಪಕ್ಷಗಳಿಗೆ ಪ್ರಯೋಜನಕಾರಿಯಾದ ಯೋಜನೆಗಳಿಗೆ ಧನಸಹಾಯ ಒದಗಿಸಲು ಕಪ್ಪವನ್ನು ನೀಡಬಹುದು. "ಕಪ್ಪ" ಎಂದು ಕರೆಸಿಕೊಳ್ಳಲು ಸ್ವೀಕರಿಸುವವನಿಗೆ ರಾಜಕೀಯ ಶರಣಾಗತಿಯ ಪಾವತಿಸುವವನಿಂದ ಮಾನ್ಯತೆಯು ಸಾಮಾನ್ಯವಾಗಿ ಬೇಕಾಗುತ್ತದೆ; ನಂತರದ ರೋಮನ್ ಮತ್ತು ಬೈಜ಼ಂಟೈನ್ ಸಾಮ್ರಾಜ್ಯಗಳು ಅನಾಗರಿಕ ಜನರಿಗೆ ಅವರು ಸಾಮ್ರಾಜ್ಯಶಾಹಿ ಪ್ರದೇಶವನ್ನು ಆಕ್ರಮಿಸದಂತೆ ತಡೆಯಲು ಪಾವತಿಸುತ್ತಿದ್ದ ದೊಡ್ಡ ಮೊತ್ತಗಳು, ಮೂಲಭೂತವಾಗಿ ರಕ್ಷಣೆ ಹಣವನ್ನು ಸಾಮಾನ್ಯವಾಗಿ "ಕಪ್ಪ" ಎಂದು ಕರೆಯಲಾಗುತ್ತಿರಲಿಲ್ಲ ಏಕೆಂದರೆ ಸಾಮ್ರಾಜ್ಯವು ಯಾವುದೇ ಕೀಳಾದ ರಾಜಕೀಯ ಸ್ಥಾನಮಾನವನ್ನು ಸ್ವೀಕರಿಸುತ್ತಿರಲಿಲ್ಲ.

ಪ್ರಾಚೀನ ಪರ್ಷಿಯನ್ ಆಕೀಮಿನಿಡ್ ಸಾಮ್ರಾಜ್ಯವು ಪ್ರಾಚೀನ ಕಪ್ಪ ಸಾಮ್ರಾಜ್ಯದ ಒಂದು ಉದಾಹರಣೆಯಾಗಿದೆ; ಇದು ತನ್ನ ಪರ್ಷಿಯನ್ ಅಲ್ಲದ ಪ್ರಜೆಗಳ ಮೇಲೆ ಚಿನ್ನ, ಐಷಾರಾಮಿ ಸರಕುಗಳು, ಪ್ರಾಣಿಗಳು, ಸೈನಿಕರು ಅಥವಾ ಆಳುಗಳಿರಬಹುದಾದ ಕಪ್ಪದ ನಿಯತ ಪಾವತಿಯನ್ನು ಬಿಟ್ಟು ತುಲನಾತ್ಮಕವಾಗಿ ಕಡಿಮೆ ಬೇಡಿಕೆಗಳನ್ನು ಇಟ್ಟಿತ್ತು. ಆದರೆ ಪಾವತಿಗಳನ್ನು ಮಾಡುವುದರಲ್ಲಿ ವಿಫಲವಾದರೆ ಪರಿಣಾಮಗಳು ಘೋರವಾಗಿರುತ್ತಿದ್ದವು. ಪರ್ಸೆಪೋಲಿಸ್‍ನಲ್ಲಿನ ಉಬ್ಬು ಶಿಲ್ಪಗಳು ವಿವಿಧ ಪ್ರಕಾರಗಳ ಕಪ್ಪವನ್ನು ಹೊತ್ತ ಚಿತ್ರಗಳ ಮೆರವಣಿಗೆಗಳನ್ನು ತೋರಿಸುತ್ತವೆ.

ರಷ್ಯಾದ ಮಧ್ಯಯುಗದ ಮಾಂಗೋಲ್ ಅರಸರು ಕೂಡ ರಷ್ಯಾದ ರಾಜ್ಯಗಳಿಂದ ಕೇವಲ ಕಪ್ಪವನ್ನು ನಿರೀಕ್ಷಿಸುತ್ತಿದ್ದರು. ಈ ರಾಜ್ಯಗಳು ತಮ್ಮ ಆಳ್ವಿಕೆ ತಾವೇ ನಡೆಸುವುದನ್ನು ಮುಂದುವರಿಸುತ್ತಿದ್ದವು. ಏಥನ್ಸ್ ಡೀಲಿಯನ್ ಕೂಟದ ಇತರ ನಗರಗಳಿಂದ ಕಪ್ಪ ಪಡೆಯುತ್ತಿತ್ತು. ಅಸ್ಸಿರಿಯಾ, ಬ್ಯಾಬಿಲಾನ್, ಕಾರ್ಥೇಜ್ ಮತ್ತು ರೋಮ್ ಸಾಮ್ರಾಜ್ಯಗಳು ತಮ್ಮ ಪ್ರಾಂತ್ಯಗಳು ಮತ್ತು ಪ್ರಜಾ ರಾಜ್ಯಗಳಿಂದ ಕಪ್ಪವನ್ನು ವಸೂಲು ಮಾಡುತ್ತಿದ್ದವು. ಪ್ರಾಚೀನ ಚೀನಾವು ಜಪಾನ್, ಕೊರಿಯಾ, ವಿಯೆಟ್ನಾಮ್, ಕಂಬೋಡಿಯಾ, ಬಾರ್ನಿಯೊ, ಇಂಡೊನೇಷ್ಯಾ, ಶ್ರೀಲಂಕಾ, ನೇಪಾಳ, ಮಾಯನ್ಮಾರ್ ಮತ್ತು ಮಧ್ಯ ಏಷ್ಯಾದಂತಹ ವಿವಿಧ ರಾಜ್ಯಗಳಿಂದ ಕಪ್ಪವನ್ನು ಪಡೆಯುತ್ತಿತ್ತು.[] ಆಜ಼್ಟೆಕ್ ಸಾಮ್ರಾಜ್ಯವು ಮತ್ತೊಂದು ಉದಾಹರಣೆಯಾಗಿದೆ. ಯುದ್ಧ ಮಾಡುವ ಉದ್ದೇಶಕ್ಕಾಗಿ ರೋಮನ್ ಗಣರಾಜ್ಯವು ಪ್ರಮಾಣಾನುಗುಣವಾದ ಆಸ್ತಿ ತೆರಿಗೆಗಳಿಗೆ ಸಮಾನವಾದ ಪಾವತಿಗಳ ರೂಪದಲ್ಲಿ ಕಪ್ಪವನ್ನು ವಸೂಲು ಮಾಡಿಕೊಳ್ಳುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Lockard, Craig A. (2007). Societies, Networks, and Transitions: A Global History: To 1500. Cengage Learning. p. 315. ISBN 0-618-38612-2.
"https://kn.wikipedia.org/w/index.php?title=ಕಪ್ಪ&oldid=873233" ಇಂದ ಪಡೆಯಲ್ಪಟ್ಟಿದೆ