ವಿಷಯಕ್ಕೆ ಹೋಗು

ನಿಮಿಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಮಿಷ ಎಂಬುವುದು ಕಾಲದ ಒಂದು ಏಕಮಾನವಾಗಿದ್ದು ಸಾಮಾನ್ಯವಾಗಿ ಒಂದು ಗಂಟೆಯ 160 ಭಾಗಕ್ಕೆ (ಅರುವತ್ತರ ಮೊದಲ ಭಿನ್ನರಾಶಿ[]) ಅಥವಾ ೬೦ ಸೆಕೆಂಡುಗಳಿಗೆ ಸಮಾನವಾಗಿರುತ್ತದೆ. ಯುಟಿಸಿ ಸಮಯ ಸ್ತರದಲ್ಲಿ, ಅಪರೂಪದ ಸಂದರ್ಭಗಳಲ್ಲಿ ನಿಮಿಷವು ೬೧ ಸೆಕೆಂಡುಗಳನ್ನು ಹೊಂದಿರುತ್ತದೆ. ಇದು ಅಧಿಕ ಸೆಕೆಂಡುಗಳ ಪರಿಣಾಮವಾಗಿರುತ್ತದೆ (ಋಣಾತ್ಮಕ ಅಧಿಕ ಸೆಕೆಂಡನ್ನು ಸೇರಿಸುವ ನಿಯಮವಿದೆ, ಇದರಿಂದ ೫೯ ಸೆಕೆಂಡುಗಳ ನಿಮಿಷವಾಗುತ್ತದೆ, ಆದರೆ ಈ ವ್ಯವಸ್ಥೆಯಡಿ ೪೦ ವರ್ಷಗಳಿಗಿಂತ ಹೆಚ್ಚು ಸಮಯದಲ್ಲಿ ಇದು ಎಂದೂ ಆಗಿಲ್ಲ). ನಿಮಿಷವು ಎಸ್ಐ ಏಕಮಾನವಲ್ಲದಿದ್ದರೂ, ಎಸ್ಐ ಏಕಮಾನಗಳೊಂದಿಗೆ ಬಳಕೆಗೆ ನಿಮಿಷವನ್ನು ಸ್ವೀಕರಿಸಲಾಗಿದೆ.[]

ಇತಿಹಾಸ

[ಬದಲಾಯಿಸಿ]

ಅಲ್-ಬಿರುನಿ ಯಹೂದಿ ತಿಂಗಳುಗಳನ್ನು ಚರ್ಚಿಸುವಾಗ ಮೊಟ್ಟಮೊದಲು ಗಂಟೆಯನ್ನು ಅರವತ್ತು ಭಾಗಗಳಲ್ಲಿ ನಿಮಿಷಗಳು, ಸೆಕೆಂಡುಗಳು, ಥರ್ಡ್ ಮತ್ತು ಫ಼ೋರ್ತ್ ಆಗಿ ವಿಭಜಿಸಿದನು.[] ೧೨೩೫ರ ಸುಮಾರು ಸ್ಯಾಕ್ರೊಬಾಸ್ಕೊದ ಜಾನ್ ಈ ಸಂಪ್ರದಾಯವನ್ನು ಮುಂದುವರಿಸಿದನು.

ಉಲ್ಲೇಖಗಳು

[ಬದಲಾಯಿಸಿ]
  1. "What is the origin of hours, minutes and seconds?". Wisteme. Archived from the original on 24 March 2012. Retrieved 2011-05-25. What we now call a minute derives from the first fractional sexagesimal place
  2. "Non-SI units accepted for use with the SI, and units based on fundamental constants". Bureau International de Poids et Mesures. Archived from the original on 2014-11-11. Retrieved 2011-05-25.
  3. Al-Biruni (1879) [1000]. The Chronology of Ancient Nations. Translated by Sachau, C. Edward. pp. 147–149.
"https://kn.wikipedia.org/w/index.php?title=ನಿಮಿಷ&oldid=979048" ಇಂದ ಪಡೆಯಲ್ಪಟ್ಟಿದೆ