ವಿಷಯಕ್ಕೆ ಹೋಗು

ನೆಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೆಪ (ವ್ಯಾಜ, ಸಬೂಬು) ಎಂದರೆ ನಿಖರವಿರದ ಏನನ್ನಾದರೂ ಮಾಡಲು ಅಥವಾ ಹೇಳಲು ಒಂದು ಕಾರಣ. ನೆಪಗಳು ಅರೆಸತ್ಯಗಳ ಮೇಲೆ ಆಧಾರಿತವಾಗಿರಬಹುದು ಅಥವಾ ದಾರಿತಪ್ಪಿಸುವ ತಯಾರಿಕೆಯ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ್ದಾಗಿರಬಹುದು. ಕ್ರಿಯೆಗಳು ಅಥವಾ ಶಬ್ದಗಳ ಹಿಂದಿನ ನಿಜವಾದ ಉದ್ದೇಶಗಳು ಅಥವಾ ತಾರ್ಕಿಕಾಧಾರವನ್ನು ಮರೆಮಾಡಲು ನೆಪಗಳನ್ನು ಬಳಸಲಾಗಿದೆ.

ಅಮೇರಿಕದ ಕಾನೂನಿನಲ್ಲಿ, ನೆಪ ಪದವು ಸಾಮಾನ್ಯವಾಗಿ ಒಂದು ಕಾನೂನು ಕ್ರಮಕ್ಕಾಗಿ ನಿಜವಾದ ಉದ್ದೇಶಗಳನ್ನು ಅಥವಾ ಪ್ರೇರಣೆಗಳನ್ನು ಮುಚ್ಚಿಡುವ ಸುಳ್ಳು ಕಾರಣಗಳನ್ನು ವಿವರಿಸುತ್ತದೆ. ಪ್ರಸ್ತಾಪಿಸಿದ ಸಾಕ್ಷ್ಯಾಧಾರಕ್ಕಾಗಿ ಒಂದು ಪಕ್ಷವು ಮೇಲ್ನೋಟಕ್ಕೆ ತೋರುವ ಮೊಕದ್ದಮೆಯನ್ನು ಸ್ಥಾಪಿಸಬಹುದಾದರೆ, ಪ್ರತಿಪಕ್ಷವು ಈ ಕಾರಣಗಳು ಊಹಾತ್ಮಕ ಅಥವಾ ಸುಳ್ಳು ಎಂದು ಸಾಬೀತು ಮಾಡಬೇಕಾಗುತ್ತದೆ. ಸಾಕ್ಷ್ಯಾಧಾರದ ಪ್ರಸ್ತುತಿಯ ಹಿಂದಿನ ಪ್ರೇರಣೆಗಳು ಸುಳ್ಳು ಎಂದು ನೇರವಾಗಿ, ಅಥವಾ ಪ್ರೇರಣೆಗಳು ವಿಶ್ವಾಸಾರ್ಹವಲ್ಲವೆಂದು ಸಾಕ್ಷ್ಯಾಧಾರಗಳಿಂದ ಪರೋಕ್ಷವಾಗಿ ತೋರಿಸಿಕೊಡುವ ಮೂಲಕ ಇದನ್ನು ಸಾಧಿಸಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. "Pretext Law & Legal Definition". uslegal.com. Retrieved 13 March 2013.
"https://kn.wikipedia.org/w/index.php?title=ನೆಪ&oldid=959628" ಇಂದ ಪಡೆಯಲ್ಪಟ್ಟಿದೆ