ಮಳೆಕಾಡು
ಮಳೆಕಾಡುಗಳು ಅತ್ಯಂತ ಹೆಚ್ಚು ಮಳೆ ಬೀಳುವ ಕಾಡುಗಳ ಲಕ್ಷಣಗಳಿಂದ ಕೂಡಿದ್ದು, ಸಹಜವಾದ ಕನಿಷ್ಠ ವಾರ್ಷಿಕ ಮಳೆ ಬೀಳುವ ಪ್ರಮಾಣ 1750–2000 ಮಿಮೀ (68-78 ಇಂಚುಗಳು)ಕ್ಕಿಂತ ಹೆಚ್ಚು ಎಂದು ಅರ್ಥನಿರೂಪಣೆ ಮಾಡುತ್ತದೆ. ಪರ್ಯಾಯವಾಗಿ ಅಂತರಉಷ್ಣವಲಯದ ಅಭಿಸರಣೆ ವಲಯವೆಂದು ಕರೆಯುವ ಮಾನ್ಸೂನ್ ಕನಿಷ್ಠ ವಾಯುಭಾರ ಪ್ರದೇಶ ,ಭೂಮಿಯ ಉಷ್ಣವಲಯದ ಮಳೆ ಕಾಡುಗಳ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಪಂಚದ ಆವಾಸಸ್ಥಾನಗಳ ಎಲ್ಲ ಪ್ರಭೇದಗಳು ಒಟ್ಟು 40 ರಿಂದ 75 ಪ್ರತಿಶತದವರೆಗೆ ಮಳೆಕಾಡುಗಳಿಗೆ ಸ್ಥಳೀಯವಾಗಿರುತ್ತದೆ.[೧] ಸಸ್ಯಗಳ, ಕೀಟಗಳ, ಮತ್ತು ಸೂಕ್ಷ್ಮ ಜೀವಿಗಳ ಅನೇಕ ದಶಲಕ್ಷದಷ್ಟು ಪ್ರಭೇದಗಳನ್ನು ಇನ್ನೂ ಶೋಧನೆ ಮಾಡಲಾಗಿಲ್ಲ ಎಂದು ಅಂದಾಜುಮಾಡಲಾಗಿದೆ. ಉಷ್ಣವಲಯದ ಮಳೆಕಾಡುಗಳನ್ನು "ಭೂಮಿಯ ಆಭರಣಗಳು" ಮತ್ತು "ಪ್ರಪಂಚದ ಅತ್ಯಂತ ದೊಡ್ಡ ಔಷದಶಾಲೆ"ಎಂದು ಕರೆಯಲಾಗುತ್ತದೆ. ಏಕೆಂದರೆ ನೈಸರ್ಗಿಕ ಔಷಧಿಗಳ ಕಾಲು ಭಾಗಕ್ಕಿಂತ ಹೆಚ್ಚು ಔಷಧಿಗಳನ್ನು ಅಲ್ಲಿ ಶೋಧಿಸಲಾಗಿದೆ.[೨] ಮಳೆಕಾಡುಗಳು, ಪ್ರಪಂಚದ 28%ಆಮ್ಲಜನಕದ ಪೂರೈಕೆಗೂ ಕೂಡ ಕಾರಣವಾಗಿವೆ. ಆಮ್ಲಜನಕದ ಉತ್ಪಾದನೆ ಎಂದು ಹೆಚ್ಚಾಗಿ ತಪ್ಪು ತಿಳಿದುಕೊಳ್ಳಲಾಗುತ್ತದೆ,[೩] ಇಂಗಾಲದ ಡೈಆಕ್ಸೈಡ್ ನಿಂದ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಮ್ಲಜನಕವನ್ನು ಸಂಸ್ಕರಿಸುತ್ತದೆ ಹಾಗು ಬಯೋಸಿಕ್ವೆಸ್ಟ್ರೇಷನ್(ಜೈವಿಕ ಕ್ರಿಯೆಗಳ ಮೂಲಕ ಇಂಗಾಲದ ಡೈಆಕ್ಸೈಡ್ ಸಂಗ್ರಹಣೆ) ಮೂಲಕ ಇಂಗಾಲವಾಗಿ ಸಂರಕ್ಷಿಸಿಡುತ್ತದೆ.
ಮಳೆಕಾಡುಗಳ ಅನೇಕ ಪ್ರದೇಶಗಳಲ್ಲಿ ನೆಲದಮಟ್ಟದವರೆಗೆ ಸೂರ್ಯನ ಬೆಳಕು ಬೀಳುವುದಿಲ್ಲವಾದ್ದರಿಂದ , ಇಲ್ಲಿ ದಟ್ಟ ಕುರುಚಲು ಗಿಡಗಳನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಕಾಡಿನಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಎಲೆಯ ಮೇಲಾವರಣವು ನಾಶವಾದಲ್ಲಿ ಅಥವಾ ಉದುರಿ ಹೋದಲ್ಲಿ, ಕಾಡಿನ ನೆಲಭಾಗವು ಬಳ್ಳಿಗಳ, ಪೊದೆಗಳ, ಕಾಡು ಎಂದು ಕರೆಯುವ ಸಣ್ಣ ಸಣ್ಣ ಮರಗಳ ಅಧಿಕ ಬೆಳವಣಿಗೆಯಿಂದಾಗಿ ತುಂಬಿಹೋಗುತ್ತದೆ. ಎರಡು ರೀತಿಯ ಮಳೆಕಾಡುಗಳಿವೆ ಅವುಗಳೆಂದರೆ: ಉಷ್ಣವಲಯದ ಮಳೆಕಾಡು ಮತ್ತು ಸಮಶೀತೋಷ್ಣ ಮಳೆಕಾಡು.
ಉಷ್ಣವಲಯ
[ಬದಲಾಯಿಸಿ]ಪ್ರಪಂಚದ ಮಳೆಕಾಡುಗಳಲ್ಲಿ ಅನೇಕ ಮಳೆಕಾಡುಗಳು, ಒಳ ಉಷ್ಣವಲಯದ ಅಭಿಸರಣೆ ವಲಯ ವೆಂದು ಕೂಡ ಕರೆಯಲಾಗುವ ಮಾನ್ಸೂನ್ ಕನಿಷ್ಠ ವಾಯುಭಾರ ಪ್ರದೇಶದೊಂದಿಗೆ ಸೇರಿಕೊಂಡಿವೆ.[೪] ಉಷ್ಣವಲಯದ ಮಳೆಕಾಡುಗಳು ಸಂಕ್ರಾಂತಿ ವೃತ್ತದಲ್ಲಿರುವಂತಹ ಮಳೆಕಾಡುಗಳಾಗಿದ್ದು, ಜಮೈಕಾದ ಬಳಿ (ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾತಿ ವೃತ್ತಗಳ ನಡುವೆ) ಪ್ರಸ್ತುತದಲ್ಲಿ ಆಗ್ನೇಯ ಏಷ್ಯಾದಲ್ಲಿ (ಮಯನ್ಮಾರ್ ನಿಂದ ಫಿಲಿಪೀನ್ಸ್‌ನವರೆಗು, ಇಂಡೊನೇಶಿಯ, ಪಾಪುವ ನ್ಯೂ ಗಿನಿಯ, ಮತ್ತು ಈಶಾನ್ಯ ಆಸ್ಟ್ರೇಲಿಯಾ), ಶ್ರೀಲಂಕಾ, ಕೆಮೆರೂನ್ ನಿಂದ ಕಾಂಗೋವರೆಗೆ (ಕಾಂಗೋ ಮಳೆಕಾಡು) ಉಪ ಸಹರಾನ್ ಆಫ್ರಿಕಾದಲ್ಲಿ, ದಕ್ಷಿಣ ಅಮೇರಿಕ (ಉದಾಹರಣೆಗೆ ಅಮೆಜಾನ್ ಮಳೆಕಾಡು), ಮಧ್ಯ ಅಮೇರಿಕ (ಉದಾಹರಣೆಗೆ , ಬೊಸವಾಸ್, ದಕ್ಷಿಣ ಯುಕಾಂಟನ್ ಪರ್ಯಾಯದ್ವೀಪ-El ಪಿಟೆನ್-ಬಿಲೈಸ್-ಕ್ಯಾಲ್ಕಮುಲ್), ಹಾಗು ಫೆಸಿಫಿಕ್ ಐಲ್ಯಾಂಡ್ ನ ಅನೇಕ ಭಾಗಗಳಲ್ಲಿ (ಹವಾಯ್ʻiಯಂತಹ) ಕಂಡು ಬರುತ್ತದೆ. ಉಷ್ಣವಲಯದ ಮಳೆಕಾಡುಗಳನ್ನು "ಭೂಮಿಯ ಶ್ವಾಸಕೋಶ"ಗಳೆಂದು ಕರೆಯಲಾಗುತ್ತದೆ ಆದರೂ ಕೂಡ ಈಗ ಮಳೆಕಾಡುಗಳು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ವಾಯುಮಂಡಲಕ್ಕೆ ಸ್ವಲ್ವ ನಿವ್ವಳಆಮ್ಲಜನಕವನ್ನು ಸೇರಿಸುತ್ತದೆ ಎನ್ನುವುದು ಈಗ ತಿಳಿದುಬಂದಿದೆ.[೫][೬]
ಸಮಶೀತೋಷ್ಣ
[ಬದಲಾಯಿಸಿ]ಸಮಶೀತೋಷ್ಣ ಮಳೆಕಾಡುಗಳು ಸಮಶೀತೋಷ್ಣವಲಯದಲ್ಲಿರುವಂತಹ ಮಳೆಕಾಡುಗಳಾಗಿವೆ. ಈ ಕಾಡುಗಳು ಉತ್ತರ ಅಮೇರಿಕ (ಪೆಸಿಫಿಕ್ ವಾಯವ್ಯ, ಬ್ರಿಟಿಷ್ ಕೊಲಂಬಿಯಾ ಕೋಸ್ಟ್, ಮತ್ತು ಪ್ರಿನ್ಸ್ ಜಾರ್ಜ್ ನ ಪೂರ್ವದ ರಾಕಿ ಮೌಂಟಿನ್ ಟ್ರೆಂಚ್ ನ ಒಳನಾಡಿನ ಮಳೆಕಾಡಿನಲ್ಲಿ ), ಹಾಗು ಯುರೋಪ್ ( ಬ್ರಿಟಿಷ್ ದ್ವೀಪಗಳ ಭಾಗಗಳಲ್ಲಿ ಉದಾಹರಣೆಗೆ ಐರ್ಲೆಂಡ್, ಸ್ಕಾಟ್ ಲೆಂಡ್, ದಕ್ಷಿಣ ನಾರ್ವೆಯ ಕಡಲತೀರದ ಪ್ರದೇಶಗಳಲ್ಲಿ, ಆಡ್ರಿಅಟಿಕ್ ತೀರದಲ್ಲಿ ಪಶ್ಚಿಮ ಬಾಲ್ಕನ್ಸ್ ನ ಭಾಗಗಳಲ್ಲಿ ಮತ್ತು ಸ್ಪೇನ್ ನ ವಾಯವ್ಯ ಭಾಗಗಳಲ್ಲಿ ಹಾಗು ಜಾರ್ಜಿಯ ಮತ್ತು ಟರ್ಕಿಯಾದ ಕರಾವಳಿಯನ್ನು ಒಳಗೊಂಡಂತೆ ಕಪ್ಪು ಸಮುದ್ರದಪೂರ್ವ ಕರಾವಳಿ ಪ್ರದೇಶಗಳಲ್ಲಿ), ಪೂರ್ವ ಏಷ್ಯಾ ( ದಕ್ಷಿಣ ಚೀನಾ, ತೈವಾನ್, ಹಾಗು ಜಪಾನ್ ಮತ್ತು ಕೊರಿಯಾದ ಬಹುಪಾಲು ಪ್ರದೇಶಗಳಲ್ಲಿ, ಹಾಗು ಸಖಾಲಿನ್ ದ್ವೀಪ ಮತ್ತು ಪಕ್ಕದ ರಷ್ಯನ್ ದೂರ ಪ್ರಾಚ್ಯ ಕರಾವಳಿತೀರದಲ್ಲಿ), ದಕ್ಷಿಣ ಅಮೇರಿಕದಲ್ಲಿ (ದಕ್ಷಿಣ ಚಿಲಿ) ಹಾಗು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿಯೂ ಕಂಡುಬರಬಹುದು.
ಪದರಗಳು
[ಬದಲಾಯಿಸಿ]ಉಷ್ಣವಲಯದ ಮಳೆಕಾಡುಗಳನ್ನು ಸಾಮಾನ್ಯವಾಗಿ ನಾಲ್ಕು ಪ್ರಮುಖ ಪದರಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿಯೊಂದನ್ನು ಆ ನಿರ್ದಿಷ್ಟ ಪ್ರದೇಶದಲ್ಲಿ ಜೀವನಕ್ಕಾಗಿ ಹೊಂದಿಕೊಂಡಿರುವ ವಿಭಿನ್ನ ಸಸ್ಯ ಮತ್ತು ಪ್ರಾಣಿಗಳೊಡನೆ ವಿಂಗಡಿಸಲಾಗಿದೆ : ಗೋಚರವಾಗುವ, ಮೇಲಾವರಣ, ಅಡಿಕಾಡು, ಮತ್ತು ಕಾಡಿನ ತಳ ಪದರಗಳು.
ಗೋಚರವಾಗುವ ಪದರ
[ಬದಲಾಯಿಸಿ]ಗೋಚರವಾಗುವ ಪದರ ವು ಸ್ವಲ್ಪ ಸಂಖ್ಯೆಯ ಅತ್ಯಂತ ದೊಡ್ಡ ಮರಗಳನ್ನು ಹೊಂದಿರುತ್ತದೆ. ಇವುಗಳನ್ನು ಗೋಚರವಾಗುವ ಮರಗಳು ಎಂದು ಕರೆಯಲಾಗುತ್ತದೆ. ಈ ಮರಗಳು 45–55 ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಸಾಮಾನ್ಯ ಮೇಲಾವರಣ ಮಟ್ಟಕ್ಕಿಂತಲೂ ಹೆಚ್ಚು ಉದ್ದ ಬೆಳೆಯುತ್ತವೆ. ಆದರೂ ಕೆಲವೊಂದು ಸಂದರ್ಭಗಳಲ್ಲಿ ಕೆಲವು ಪ್ರಭೇದಗಳು 70–80 ಮೀಟರ್ ನಷ್ಟು ಎತ್ತರ ಬೆಳೆಯುತ್ತವೆ.[೭][೮] ಅವುಗಳು ಕೆಲವು ಪ್ರದೇಶಗಳಲ್ಲಿ ತಾಪಮಾನವನ್ನು ಮತ್ತು ಬಲವಾದ ಗಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಈ ಪದರದಲ್ಲಿ ಹದ್ದುಗಳು, ಚಿಟ್ಟೆಗಳು, ಬಾವಲಿಗಳು ಮತ್ತು ನಿರ್ದಿಷ್ಟ ಮಂಗಗಳು ವಾಸವಾಗಿವೆ.
ಮೇಲಾವರಣ ಪದರ
[ಬದಲಾಯಿಸಿ]ಮೇಲಾವರಣ ಪದರವು ಬಹುಸಂಖ್ಯೆಯ ದೊಡ್ಡ ಮರಗಳನ್ನು ಒಳಗೊಂಡಿರುತ್ತದೆ. ಈ ಮರಗಳು 30-45 ಮೀಟರ್ ನಷ್ಟು ಉದ್ದ ಬೆಳೆಯುತ್ತವೆ. ಜೀವ ವೈವಿಧ್ಯದ ದಟ್ಟವಾದ ಪ್ರದೇಶವು ಮೇಲಾವರಣ ಕಾಡಿನಲ್ಲಿ ಕಂಡು ಬರುತ್ತದೆ. ಈ ಕಾಡು ಹೆಚ್ಚು ಕಡಿಮೆ ನಿರಂತರವಾಗಿ ಅಕ್ಕಪಕ್ಕದ ಎತ್ತರದ ಮರಗಳಿಂದ ರಚಿತವಾದ ಎಲೆಗೊಂಚಲುಗಳಿಂದ ವ್ಯಾಪಿಸಿರುತ್ತದೆ. ಕೆಲವೊಂದು ಅಂದಾಜಿನ ಪ್ರಕಾರ ಮೇಲಾವರಣವು 50 ಪ್ರತಿಶತ ದಷ್ಟು ಎಲ್ಲಾ ಸಸ್ಯಪ್ರಬೇಧಗಳ ಆಸರೆಯಾಗಿದೆ. ಅಲ್ಲದೇ ಬಹುಶಃ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಲ್ಲಿ ಅರ್ಧಭಾಗ ಅಲ್ಲಿ ಕಂಡು ಬರಬಹುದು ಎಂದು ಸೂಚಿಸಲಾಗಿದೆ. ಅಧಿಸಸ್ಯಗಳು, ಕಾಂಡಗಳು ಮತ್ತು ಕೊಂಬೆಗಳಿಗೆ ಅಂಟಿಕೊಂಡಿರುತ್ತವೆ. ಅಲ್ಲದೇ ನೀರು ಮತ್ತು ಖನಿಜಗಳನ್ನು ಮಳೆಯಿಂದ ಮತ್ತು ಅದು ಪೋಷಕ ಸಸ್ಯದಲ್ಲಿರುವ ಭಗ್ನಾವಶೇಷಗಳಿಂದ ಪಡೆದುಕೊಳ್ಳುತ್ತದೆ. ಗೋಚರವಾಗುವ ಪದರದಲ್ಲಿ ಕಂಡು ಬಂದ ಪ್ರಾಣಿಕೋಟಿಯೇ ಇಲ್ಲಿಯೂ ಕಂಡು ಬರುತ್ತದೆ, ಆದರೆ ಹೆಚ್ಚು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಕಾಲು ಭಾಗದಷ್ಟು ಕೀಟಗಳ ಎಲ್ಲಾ ಜಾತಿಗಳು ಮೇಲಾವರಣ ಮಳೆಕಾಡಿನಲ್ಲಿವೆ ಎಂದು ನಂಬಲಾಗಿದೆ. ವಿಜ್ಞಾನಿಗಳು , ಮೇಲಾವರಣ ಆವಾಸ ಸ್ಥಾನವಾಗಿ ಅದರ ಸಮೃದ್ಧತೆಯನ್ನು ದೀರ್ಘಕಾಲದ ವರೆಗೆ ಅನುಮಾನಿಸಿದ್ದರು. ಆದರೆ ಕೇವಲ ಇತ್ತೀಚೆಗಷ್ಟೇ ಅದನ್ನು ಪರೀಕ್ಷಿಸುವ ಪ್ರಾಯೋಗಿಕ ವಿಧಾನಗಳನ್ನು ಅಭಿವೃದ್ಧಿಪಡಿಸಲಾಯಿತು. 1917 ರ ವರೆಗು, ಪ್ರಕೃತಿಶಾಸ್ತ್ರಜ್ಞ ವಿಲಿಯಂ ಬೀಬೆ "ಜೀವಿಗಳ ಮತ್ತೊಂದು ಭೂಖಂಡವನ್ನು ಶೋಧಿಸಬೇಕಾಗಿದೆ, ಭೂಮಿಯ ಮೇಲಲ್ಲ , ಆದರೆ ಒಂದರಿಂದ ಎರಡುನೂರು ಅಡಿಗಳಷ್ಟು ಭೂಮಿಯ ಮೇಲ್ಭಾಗದಲ್ಲಿ ಹಾಗು ಸುಮಾರು ಸಾವಿರಾರು ಚದರ ಮೈಲಿಗಳಷ್ಟು ವಿಸ್ತರಿಸಿದೆ" ಎಂದು ಘೋಷಿಸಿದ್ದರು. ಈ ಆವಾಸ ಸ್ಥಾನಗಳ ನಿಜವಾದ ಪರಿಶೋಧನೆ ಕೇವಲ 1980ರ ದಶಕದಲ್ಲಿ ಪ್ರಾರಂಭವಾಯಿತು. ವಿಜ್ಞಾನಿಗಳು ಮೇಲಾವರಣವನ್ನು ತಲುಪಲು ವಿಧಾನಗಳನ್ನು ಕಂಡುಹಿಡಿದಾಗ ಇದರ ಶೋಧನೆ ಆರಂಭವಾಯಿತು. ಉದಾಹರಣೆಗೆ, ಅಡ್ಡ ಬಿಲ್ಲುಗಳನ್ನು ಬಳಸಿಕೊಂಡು ಮರಗಳಿಗೆ ಹಗ್ಗವನ್ನು ಕಟ್ಟುವುದು. ಮೇಲಾವರಣದ ಪರಿಶೋಧನೆಯು ಇನ್ನೂ ಶೈಶವಾವಸ್ಥೆಯಲ್ಲೇ ಇತ್ತು , ಆದರೆ ಇತರ ವಿಧಾನಗಳು ಬಲೂನ್(ಆಕಾಶ ಬುಟ್ಟಿ)ಗಳ ಮತ್ತು ಅತ್ಯಂತ ಎತ್ತರದ ಕೊಂಬೆಗಳ ಮೇಲೆ ತೇಲುವ ವಾಯುನೌಕೆಗಳ ಬಳಕೆ ಸೇರಿಕೊಂಡವು. ಕಾಡಿನ ನೆಲದಲ್ಲಿ ಕ್ರೇನುಗಳು ಮತ್ತು ಮತ್ತು ನಡೆದಾರಿಗಳನ್ನು ನಿರ್ಮಿಸಲಾಯಿತು. ಉಷ್ಣವಲಯದ ಮೇಲಾವರಣ ಕಾಡನ್ನು ಪ್ರವೇಶಿಸುವ ವಿಜ್ಞಾನವು ವಾಯುನೌಕೆಗಳನ್ನು ಅಥವಾ ಡೆಂಡ್ರೋನಾಟಿಕ್ಸ್ ಎಂದು ಕರೆಯುವ ಅದೇರೀತಿಯ ವೈಮಾನಿಕ ವೇದಿಕೆಗಳನ್ನು ಬಳಸುತ್ತದೆ.[೯]
ಅಡಿಕಾಡಿನ ಪದರ
[ಬದಲಾಯಿಸಿ]ಅಡಿಕಾಡಿನ ಪದರವು ಮೇಲಾವರಣ ಮತ್ತು ಕಾಡಿನ ತಳದ ಮಧ್ಯದಲ್ಲಿರುತ್ತದೆ. ಅಡಿಕಾಡು (ಅಥವಾ ಅಂಡರ್‌ಸ್ಟೋರೆ), ಹಲವು ಪಕ್ಷಿಗಳು, ಹಾವುಗಳು, ಮತ್ತು ಹಲ್ಲಿಗಳು ಹಾಗು ಜಾಗ್ವರ್ ಗಳು, ಬೋವಗಳು(ಬೋವ ಜಾತಿಯ ಹೆಬ್ಬಾವು), ಮತ್ತು ಚಿರತೆಗಳಂತಹ ಪರಭಕ್ಷಕಗಳಿಗೆ ನೆಲೆಯಾಗಿದೆ. ಈ ಹಂತದಲ್ಲಿ ಎಲೆಗಳು ಅತ್ಯಂತ ಅಗಲವಾಗಿರುತ್ತವೆ. ಕೀಟಗಳ ಜೀವನ ಕೂಡ ಇಲ್ಲಿ ಹೇರಳವಾಗಿವೆ. ಮೇಲಾವರಣ ಮಟ್ಟದಲ್ಲಿ ಬೆಳೆಯುವ ಅನೇಕ ಎಳೆಗಿಡಗಳು ಅಡಿಕಾಡಿನಲ್ಲಿರುತ್ತವೆ. ಮಳೆಕಾಡಿಗೆ ಬೀಳುವ ಸೂರ್ಯನ ಬೆಳಕಿನಲ್ಲಿ ಕೇವಲ 5 ಪ್ರತಿಶತ ದಷ್ಟು ಬೆಳಕುಮಾತ್ರ ಅಡಿಕಾಡನ್ನು ತಲುಪುತ್ತದೆ. ಈ ಪದರವನ್ನು ಪೊದೆ ಪದರ ಎಂದು ಕೂಡ ಕರೆಯಲಾಗುತ್ತದೆ. ಆದರು ಪೊದೆ ಪದರವನ್ನು ಪ್ರತ್ಯೇಕವಾದ ಪದರವೆಂದು ಪರಿಗಣಿಸಲಾಗುತ್ತದೆ.
ಕಾಡಿನ ತಳ
[ಬದಲಾಯಿಸಿ]ಕಾಡಿನ ತಳ ವು, ಅತ್ಯಂತ ಕೆಳ ಪದರವಾಗಿದ್ದು, ಕೇವಲ 2 ಪ್ರತಿಶತದಷ್ಟು ಮಾತ್ರ ಸೂರ್ಯನ ಬೆಳಕನ್ನು ಪಡೆಯುತ್ತದೆ. ಕಡಿಮೆ ಬೆಳಕಿನಲ್ಲಿ ಬೆಳೆಯುವ ಸಸ್ಯಗಳು ಮಾತ್ರ ಇಲ್ಲಿ ಬೆಳೆಯ ಬಲ್ಲವು. ದಟ್ಟವಾದ ಕುರುಚಲು ಗಿಡಗಳಿರುವ ನದಿಗಳ ತೀರಗಳಿಂದ , ಜೌಗು ಪ್ರದೇಶಗಳಿಂದ ಹಾಗು ಕಾಡುಜಮೀನುಗಳಿಂದ ಇದು ದೂರವಿರುವ ಕಾರಣ ಕಾಡಿನ ತಳದಲ್ಲಿ ಸಸ್ಯವರ್ಗ ಕಂಡುಬರುವುದಿಲ್ಲ, ಏಕೆಂದರೆ ಇಲ್ಲಿಗೆ ಹೆಚ್ಚು ಸೂರ್ಯನ ಬೆಳಕು ತಲುಪುವುದಿಲ್ಲ. ಇದು ಕೊಳೆಯುವ ಸಸ್ಯ ಪ್ರಾಣಿಗಳ ಅವಶೇಷಗಳು ಕೂಡ ಒಳಗೊಂಡಿದೆ, ಇವು ಅತ್ಯಂತ ವೇಗವಾಗಿ ಕೊಳೆಯುವಂತೆ ಮಾಡುವ ಉಷ್ಣದ , ತೇವದ ಪರಿಸ್ಥಿಗಳಿಂದಾಗಿ ಅತಿ ಬೇಗ ಮರೆಯಾಗುತ್ತವೆ. ಪ್ರಾಣಿಗಳ ಮತ್ತು ಸಸ್ಯಗಳ ಅವಶೇಷಗಳನ್ನು ಕೊಳೆಯಿಸುವ ಅನೇಕ ರೀತಿಯ ಶಿಲೀಂಧ್ರಗಳು ಇಲ್ಲಿ ಬೆಳೆಯುತ್ತವೆ.
ಸಸ್ಯಸಂಪತ್ತು ಮತ್ತು ಪ್ರಾಣಿಸಂಕುಲ
[ಬದಲಾಯಿಸಿ]ಪ್ರಪಂಚದ ಸಸ್ಯಗಳ ಮತ್ತು ಪ್ರಾಣಿಗಳ ಜಾತಿಗಳಲ್ಲೇ ಅರ್ಧದಷ್ಟು ಜಾತಿಗಳು ಮಳೆಕಾಡಿನಲ್ಲಿ ಕಂಡುಬರುತ್ತವೆ.[೧೦] ಮಳೆಕಾಡುಗಳು, ಸಸ್ತನಿಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಅಕಶೇರುಕಗಳನ್ನು ಒಳಗೊಂಡಂತೆ ಪ್ರಾಣಿಸಂಕುಲದ ಅತಿ ದೊಡ್ಡ ಸರಣಿಯನ್ನು ಪೋಷಿಸುತ್ತದೆ. ಸಸ್ತನಿಗಳು, ಪ್ರೈಮೇಟ್, ಫೀಲಿಡ್, ಮತ್ತು ಇತರ ವಂಶಳನ್ನು ಒಳಗೊಳ್ಳಬಹುದು. ಸರೀಸೃಪಗಳು, ಹಾವುಗಳನ್ನು, ಟರ್ಟಲ್(ಕಡಲಾಮೆ)ಗಳನ್ನು, ಗೋಸುಂಬೆಗಳನ್ನು, ಮತ್ತು ಇತರ ವಂಶಗಳನ್ನು ಒಳಗೊಂಡರೆ, ಪಕ್ಷಿಗಳು ವಾಂಗಿಡೇ ಮತ್ತು ಕುಕ್ಯುಲಿಡೇಯಂತಹ ವಂಶಗಳನ್ನು ಒಳಗೊಳ್ಳುತ್ತವೆ. ಮಳೆಕಾಡುಗಳಲ್ಲಿ ಅಕಶೇರುಕಗಳ ಡಜನ್ ಗಟ್ಟಲೆ ಕುಟುಂಬಗಳು ಕಂಡುಬರುತ್ತವೆ. ಶಿಲೀಂಧ್ರಗಳು ಕೂಡ ಮಳೆಕಾಡಿನ ಪ್ರದೇಶಗಳಲ್ಲಿ ಅತೀ ಸಾಮಾನ್ಯವಾಗಿ ಕಂಡುಬರುತ್ತವೆ. ಏಕೆಂದರೆ ಅವು ಸಸ್ಯಗಳ ಮತ್ತು ಪ್ರಾಣಿಗಳ ಕೊಳೆತ ಅವಶೇಷಗಳನ್ನು ತಿಂದು ಬದುಕಬಲ್ಲವು. ಈ ಜಾತಿಗಳು, ಅರಣ್ಯ ನಾಶದಿಂದಾಗಿ, ಆವಾಸ ಸ್ಥಾನದ ಕೊರತೆಯಿಂದಾಗಿ ಹಾಗು ವಾಯುಮಂಡಲಕ್ಕೆ ಜೀವ ರಾಸಾಯನಿಕದ ಬಿಡುಗಡೆಯಿಂದಾಗಿ ತೀವ್ರಗತಿಯಲ್ಲಿ ಕಣ್ಮರೆಯಾಗುತ್ತಿವೆ.[೧೧]
ಮಣ್ಣುಗಳು
[ಬದಲಾಯಿಸಿ]ಉಷ್ಣವಲಯದ ಮಳೆಕಾಡುಗಳಲ್ಲಿ ಸಸ್ಯವರ್ಗ ದ ಬೆಳೆವಣಿಗೆಯ ಹೊರತಾಗಿ, ಮಣ್ಣಿನ ಗುಣಮಟ್ಟ ವು ಹೆಚ್ಚಾಗಿ ಕೆಳಮಟ್ಟದ್ದಾಗಿರುತ್ತದೆ. ಇಲ್ಲಿ ಅತಿವೇಗವಾದ ಬ್ಯಾಕ್ಟೀರಿಯಗಳ ಕೊಳೆಯುವಿಕೆ, ಮಣ್ಣುಗೊಬ್ಬರ ಸಂಚಯಿಸದಂತೆ ತಡೆಯುತ್ತದೆ. ಜಂಬುಮಣ್ಣಾಗುವ ಪ್ರಕ್ರಿಯೆ ಮೂಲಕ ಉತ್ಪತ್ತಿಯಾಗುವ ಕಬ್ಬಿಣ ಮತ್ತು ಅಲ್ಯುಮೀನಿಯಂ ಆಕ್ಸೈಡ್ ನ ಸಾರವು ಗಾಢವಾದ ಕೆಂಪುಬಣ್ಣದ ಆಕ್ಸಿಸಾಲ್ಅನ್ನು ಹಾಗು ಕೆಲವೊಮ್ಮೆ ಬಾಕ್ಸೈಟ್ ನಂತಹ ಗಣಿಗಾರಿಕೆಯ ನಿಕ್ಷೇಪಗಳನ್ನು ಉತ್ಪತ್ತಿ ಮಾಡುತ್ತದೆ. ಬಹುಪಾಲು ಸಸ್ಯಗಳು ಮೇಲ್ಮೈನ ಹತ್ತಿರವೇ ಬೇರುಗಳನ್ನು ಒಳಗೊಂಡಿರುತ್ತವೆ, ಏಕೆಂದರೆ ಭೂಮಿಯ ಕೆಳಗೆ ಅಷ್ಟೊಂದು ಪೌಷ್ಟಿಕಾಂಶಗಳು ದೊರೆಯುವುದಿಲ್ಲ; ಬಹುಪಾಲು ಮರಗಳ ಖನಿಜಗಳು ಎಲೆಗಳ(ಪ್ರಧಾನವಾಗಿ) ಮತ್ತು ಪ್ರಾಣಿಗಳ ಕೊಳೆತ ಅವಶೇಷಗಳ ಮೇಲಿನ ಪದರದಿಂದ ಸಿಗುತ್ತದೆ. ವಿಶೇಷವಾಗಿ ಜ್ವಾಲಾಮುಖಿಗಳಿಂದ ಹುಟ್ಟಿಕೊಂಡ ಎಳೆಯ ತಳ ಪದರದ ಮೇಲೆ ಉಷ್ಣವಲಯದ ಮಣ್ಣು ಬಹುಶಃ ಸ್ವಲ್ಪ ಫಲವತ್ತಾಗಿರುತ್ತದೆ. ಒಂದು ವೇಳೆ ಮರಗಳನ್ನು ಕಡಿದುಹಾಕಿದರೆ, ಮಣ್ಣಿನ ಮೇಲೆ ಮಳೆ ಬಿದ್ದು ಮಣ್ಣನ್ನು ಕೊಚ್ಚಿಕೊಂಡು ಹೋಗಬಹುದು. ಅಂತಿಮವಾಗಿ , ಹಳ್ಳ , ತೊರೆಗಳು ರೂಪುಗೊಂಡು ನಂತರ ನದಿಗಳು ರೂಪುಗೊಳ್ಳುತ್ತವೆ. ಪ್ರವಾಹದ ಸಾಧ್ಯತೆಗಳು ಉಂಟಾಗಬಹುದು.
ಜಾಗತಿಕ ಹವಾಮಾನದ ಮೇಲೆ ಪರಿಣಾಮಗಳು
[ಬದಲಾಯಿಸಿ]ನೈಸರ್ಗಿಕ ಮಳೆಕಾಡು ಬೃಹತ್ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತದೆ ಮತ್ತು ಹೀರಿಕೊಳ್ಳುತ್ತದೆ. ಜಾಗತಿಕ ಪ್ರಮಾಣದಲ್ಲಿ, ಸುದೀರ್ಘಕಾಲದ ಹರಿವುಗಳು ಸರಿಸುಮಾರಾಗಿ ಸಮತೋಲನದಲ್ಲಿರುತ್ತವೆ. ಆದ್ದರಿಂದ ನಿರಾತಂಕ ಮಳೆಕಾಡು, ವಾಯುಮಂಡಲದ ಇಂಗಾಲದ ಡೈಆಕ್ಸೈಡ್ ನ ಮಟ್ಟಗಳ ಮೇಲೆ ಸಣ್ಣ ನಿವ್ವಳ ಪ್ರಮಾಣದ ಪ್ರಭಾವವನ್ನು ಬೀರುತ್ತದೆ.[೧೨] ಆದರೂ ಅವು ಇತರ ಹವಾಮಾನದ ಪ್ರಭಾವಗಳಿಗೆ ಒಳಗಾಗಬಹುದು( ಮೋಡದ ರಚನೆ, ನೀರಿನ ಆವಿಯ ಮರುಬಳಕೆ). ಇಂದು ನಿರಾತಂಕವಾಗಿರುವ ಮಳೆಕಾಡು ಎಂದು ಪರಿಗಣಿಸಲಾಗಿರುವ ಯಾವುದೇ ಮಳೆಕಾಡಿಲ್ಲ.[೧೩] ಮಾನವ ಪ್ರೇರಿತ ಅರಣ್ಯನಾಶವು ಮಳೆಕಾಡುಗಳು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕ್ಷಾಮ ದಂತಹ [೧೪] ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಮರಗಳ ನಾಶ ಉಂಟಾಗಿ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ.[೧೫] ಕೆಲವು ಹವಾಮಾನದ ಮಾದರಿಗಳು ಪರಸ್ಪರ ಪ್ರಭಾವ ಬೀರುವ ಸಸ್ಯವರ್ಗದೊಂದಿಗೆ ಮುಂದುವರೆಯುತ್ತವೆ ಹಾಗು 2050 ರಷ್ಟರ ಹೊತ್ತಿಗೆ ಕ್ಷಾಮದಿಂದಾಗಿ ಅಮೇಜಾನ್ ಮಳೆಕಾಡು ಬೃಹತ್ ಪ್ರಮಾಣದಲ್ಲಿ ನಾಶವಾಗ ಬಹುದು ಎಂದು ಮುನ್ನಂದಾಜು ಮಾಡಲಾಗಿದೆ. ಕಾಡಿನ ಮರಗಳು ನಾಶವಾಗಿ ಇದಕ್ಕೆ ಪ್ರತಿಕ್ರಿಯೆಯಾಗಿ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡಬಹುದು ಎಂದು ಊಹಿಸಲಾಗಿದೆ.[೧೬] ಈಗಿನಿಂದ ಐದು ಸಾವಿರ ವರ್ಷಗಳಲ್ಲಿ ಅಮೇಜಾನ್ ಮಳೆಕಾಡು ಒಣಗಿ ಹೋಗಿ, ಅದು ಹುಲ್ಲುಗಾಡಾಗಿ ಬದಲಾಗುತ್ತದೆ; ಅಭಿವೃದ್ಧಿಯ ಹೆಸರಿನಲ್ಲಿ ಸ್ವತಃ ನಾಶವಾಗುತ್ತದೆ (ರಾತ್ರೋರಾತ್ರಿ ಮಾನವ ಅರಣ್ಯ ನಾಶ ಚಟುವಟಿಕೆಯನ್ನು ನಿಲ್ಲಿಸಿದರೂ ಕೂಡ).[೧೭] ನಾವು ತಿಳಿದಿರುವ ಪ್ರಾಣಿಗಳ ಸಂತತಿಗಳು ಮುಂಚಿನ ಅಮೇಜಾನ್ ಮಳೆಕಾಡಿನ ಶುಷ್ಕ ಹುಲ್ಲುಗಾಡಿಗೆ ಹೊಂದಿಕೊಳ್ಳುತ್ತವೆ ಹಾಗು ಹೊಸ ಬೆಚ್ಚಗಿನ ತಾಪಮಾನದಲ್ಲಿ ಹುಲುಸಾಗಿ ಬೆಳೆಯುತ್ತವೆ.[೧೭]
ಮಾನವ ಬಳಕೆ
[ಬದಲಾಯಿಸಿ]ಉಷ್ಣವಲಯದ ಮಳೆಕಾಡುಗಳು, ಮರದ ದಿಮ್ಮಿಗಳನ್ನು ಹಾಗು ಮಾಂಸ ಮತ್ತು ಚರ್ಮದಂತಹ ಪ್ರಾಣಿಯ ಉತ್ಪನ್ನಗಳನ್ನು ಒದಗಿಸುತ್ತವೆ. ಮಳೆಕಾಡುಗಳು ಪ್ರವಾಸಿ ಸ್ಥಳಗಳಾಗಿಯೂ ಹಾಗು ಪರಿಸರ ವ್ಯವಸ್ಥೆಯ ಸೇವೆಯನ್ನು ನೀಡುವಲ್ಲಿಯೂ ಮೌಲ್ಯವನ್ನು ಹೊಂದಿದೆ. ಅನೇಕ ಆಹಾರಗಳು ಮೂಲತಃ ಉಷ್ಣವಲಯದ ಕಾಡುಗಳಿಂದ ಬರುತ್ತವೆ. ಅಲ್ಲದೇ ಅವುಗಳನ್ನು ಬಹುಶಃ ಮುಂಚೆ ಪ್ರಮುಖ ಕಾಡುಗಳಾಗಿದ್ದ ಪ್ರದೇಶಗಳ ಜಮೀನಿನಲ್ಲಿ ಬೆಳೆದಿರಬಹುದು.[೧೮] ಅಲ್ಲದೇ ಸಸ್ಯಗಳಿಂದ ಪಡೆಯಲಾದ ಔಷಧಿಗಳನ್ನು ಜ್ವರ, ಶಿಲೀಂಧ್ರ ಸೊಂಕು, ಸುಟ್ಟಗಾಯ, ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು, ನೋವು, ಉಸಿರಾಟದ ಸಮಸ್ಯೆ ಮತ್ತು ಗಾಯಗಳ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.[೧೯]
ಸ್ಥಳೀಯ ಜನರು
[ಬದಲಾಯಿಸಿ]2007 ರ ಜನವರಿ 18 ರ ಹೊತ್ತಿಗೆ FUNAI, ಬ್ರೆಜಿಲ್ ನಲ್ಲಿ ನಾಗರಿಕತೆಯ ಸಂಪರ್ಕವಿಲ್ಲದ 67 ವಿಭಿನ್ನ ಬುಡಕಟ್ಟು ಜನಾಂಗಗಳಿವೆ. 2005 ರಲ್ಲಿ ಈ ಜನಾಂಗಗಳ ಸಂಖ್ಯೆ 40ರಷ್ಟಿತ್ತು ಎಂದು ದೃಢಪಡಿಸಿರುವುದಾಗಿ ವರದಿಮಾಡಿದೆ. ಇದರ ಜೊತೆಯಲ್ಲಿ, ಬ್ರೆಜಿಲ್ ಅತ್ಯಂತ ಹೆಚ್ಚು ನಾಗರಿಕತೆಯ ಸಂಪರ್ಕವಿಲ್ಲದ ಬುಡಕಟ್ಟು ಜನಾಂಗವನ್ನು ಹೊಂದಿರುವ ರಾಷ್ಟ್ರವಾಗಿ ಈಗ ನ್ಯೂ ಗಿನಿಯ ಐಲೆಂಡ್ ಅನ್ನು ಮೀರಿಸಿದೆ.[೨೦] ನ್ಯೂ ಗಿನಿಯ ದ್ವೀಪದಲ್ಲಿರುವ ಇರಿಯನ್ ಜಯ ಅಥವಾ ಪಶ್ಚಿಮ ಪರುವಾದ ಪ್ರದೇಶವು ನಾಗರಿಕತೆ ಸಂಪರ್ಕವಿಲ್ಲದ 44 ಬುಡಕಟ್ಟು ಗುಂಪುಗಳ ನೆಲೆಬೀಡಾಗಿದೆ.[೨೧] ಅರಣ್ಯನಾಶದಿಂದಾಗಿ ಬುಡಕಟ್ಟು ಜನಾಂಗದವರು ವಿಶೇಷವಾಗಿ ಬ್ರೆಜಿಲ್ ನಲ್ಲಿ ಅಪಾಯದ ಅಂಚಿನಲ್ಲಿದ್ದಾರೆ.
ಮಧ್ಯ ಆಫ್ರಿಕನ್ ಮಳೆಕಾಡು, ಎಂಬುಟಿ ಪಿಗ್ಮಿಗಳ ನೆಲೆಬೀಡಾಗಿದೆ. ಸಮಭಾಜಕ ವೃತ್ತದ ಮಳೆಕಾಡುಗಳಲ್ಲಿರುವ ಬೇಟೆಗಾರ ಜನಾಂಗಗಳಲ್ಲಿ ಇವರು ಒಬ್ಬರು. ಇವರು ಕುಳ್ಳಗಿನ ಲಕ್ಷಣಗಳಿಂದ ಕೂಡಿದ್ದಾರೆ(ಒಂದುವರೆ ಮೀಟರ್ ಗಳಿಗಿಂತ ಗಿಡ್ಡವಿರುತ್ತಾರೆ ಅಥವಾ ಸರಿಸುಮಾರು 59 ಇಂಚುಗಳಷ್ಟಿರುತ್ತಾರೆ). ಇವರು ಕಾಲಿನ್ ಟರ್ನ್ ಬುಲ್ ರ ಅಧ್ಯಯನದ ವಿಷಯವಾಗಿದ್ದರು.. ಇವರು 1962 ರಲ್ಲಿ ದಿ ಫಾರೆಸ್ಟ್ ಪಿಪಲ್ ಎಂಬ ಪುಸ್ತಕ ಬರೆದರು.[೨೨] ಉಳಿದವರಲ್ಲಿ ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿರುವ ಪಿಗ್ಮಿಗಳನ್ನು “ನಿಗ್ರೀಟೋ ಎಂದು ಕರೆಯಲಾಗುತ್ತದೆ.
ಅರಣ್ಯನಾಶ
[ಬದಲಾಯಿಸಿ]ಉಷ್ಣವಲಯದ ಮತ್ತು ಸಮಶೀತೋಷ್ಣ ವಲಯದ ಮಳೆಕಾಡುಗಳನ್ನು ಬೃಹತ್ ಪ್ರಮಾಣದಲ್ಲಿ ಮರದ ದಿಮ್ಮಿಗಳಿಗಾಗಿ ಕಡಿದು ಹಾಕಲಾಗಿದೆ ಹಾಗು 20 ನೇ ಶತಮಾನದುದ್ದಕ್ಕೂ ಕೃಷಿ ಉದ್ದೇಶಕ್ಕಾಗಿ ಅರಣ್ಯನಾಶ ಮಾಡಲಾಗಿದೆ. ಅಲ್ಲದೇ ಪ್ರಪಂಚದಾದ್ಯಂತ ಮಳೆಕಾಡುಗಳಿಂದ ಆವರಿಸಿದ್ದ ಪ್ರದೇಶ ಕ್ಷೀಣಿಸುತ್ತಿದೆ.[೨೩] ಬೃಹತ್ ಪ್ರಮಾಣದ ಪ್ರಭೇದಗಳು ಅಳಿವಿನಂಚನ್ನು ತಲುಪುತ್ತಿವೆ ಎಂದು ಜೀವವಿಜ್ಞಾನಿಗಳು ಅಂದಾಜುಮಾಡಿದ್ದಾರೆ (ವರ್ಷಕ್ಕೆ ಬಹುಶಃ 50,000 ಕ್ಕಿಂತ ಹೆಚ್ಚು; ಹಾರ್ವರ್ಡ್ ವಿಶ್ವವಿದ್ಯಾನಿಲಯದ E. O. ವಿಲ್ಸನ್ ಹೇಳುವ ಪ್ರಕಾರ ಈ ಪ್ರಮಾಣದಲ್ಲಿ ಕ್ಷೀಣಿಸಿದರೆ ಭೂಮಿಯ ಮೇಲಿರುವ ಎಲ್ಲ ಪ್ರಬೇಧಗಳಲ್ಲಿ ಕಾಲುಭಾಗ ಅಥವಾ ಅದಕ್ಕಿಂತ ಹೆಚ್ಚು ಪ್ರಬೇಧಗಳು 50 ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ ಎಂದು ಹೇಳಿದ್ದಾರೆ)[೨೪] ಮಳೆಕಾಡುಗಳ ನಾಶದಿಂದ ಆವಾಸಸ್ಥಾನಗಳಿಗೆ ಧಕ್ಕೆಯೇ ಇದಕ್ಕೆ ಕಾರಣವಾಗಿದೆ.
ನಗರ ಪ್ರದೇಶಗಳ ವಿಸ್ತರಣೆಯು ಮಳೆಕಾಡು ನಾಶವಾಗಲು ಮತ್ತೊಂದು ಕಾರಣವಾಗಿದೆ. ಪೂರ್ವ ಆಸ್ಟ್ರೇಲಿಯಾದ ಕರಾವಳಿ ಪ್ರದೇಶಗಳಲ್ಲಿ ಬೆಳೆಯುವ ಕಡಲತಡಿಯ ಮಳೆಕಾಡು , ಗೃಹನಿರ್ಮಾಣ ಬೆಳವಣಿಗೆಯಿಂದಾಗಿ ನಾಶವಾಗಿದೆ. ಇದು ಕಡಲ ತೀರಕ್ಕೆ ಸ್ಥಳಾಂತರ ಮಾಡುವ ಜೀವನಶೈಲಿಯ ಬೇಡಿಕೆಗಳನ್ನು ಪೂರೈಸಿದ ಕಾರಣದಿಂದ ಉಂಟಾಯಿತು.[೨೫]
ಕಾಡುಗಳನ್ನು ತ್ವರಿತಗತಿಯಲ್ಲಿ ನಾಶಮಾಡಲಾಗುತ್ತಿದೆ.[೨೬][೨೭][೨೮] ಪಶ್ಚಿಮ ಆಫ್ರಿಕಾದ ಸುಮಾರು 90 ಪ್ರತಿಶತದಷ್ಟು ಮಳೆಕಾಡು ನಾಶವಾಗಿದೆ.[೨೯] ಮಾನವರು ಕಾಲಿರಿಸಿದ 2000 ವರ್ಷಗಳಿಂದೀಚೆಗೆ ಮಡಗಾಸ್ಕರ್ ಅದರ ಮೂಲ ಮಳೆಕಾಡಿನಲ್ಲಿ ಮೂರನೇ ಎರಡು ಭಾಗವನ್ನು ಕಳೆದುಕೊಂಡಿದೆ.[೩೦] ಪ್ರಸ್ತುತದ ಪ್ರಮಾಣದಲ್ಲಿ, ಉಷ್ಣವಲಯದ ಮಳೆಕಾಡುಗಳು ಇಂಡೊನೇಷ್ಯಾದಲ್ಲಿ 10 ವರ್ಷಗಳೊಳಗೆ ಮತ್ತು ಪಾವುವ ನ್ಯೂ ಗಿನಿಯಲ್ಲಿ 13 ರಿಂದ 16 ವರ್ಷಗಳೊಳಗೆ ನಾಶವಾಗುತ್ತವೆ.[೩೧]
ಅನೇಕ ರಾಷ್ಟ್ರಗಳು[೩೨] ವಿಶೇಷವಾಗಿ ಬ್ರೆಜಿಲ್, ಅದರ ಅರಣ್ಯನಾಶದ ಬಗ್ಗೆ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿತು.[೩೩] ಅಮೇಜಾನ್ ನ ಅರಣ್ಯನಾಶವು 2007 ರ ಹನ್ನೆರಡು ತಿಂಗಳುಗಳಿಗೆ ಹೋಲಿಸಿದರೆ 2008 ರಷ್ಟರ ಹೊತ್ತಿಗೆ 69 ಪ್ರತಿಶತದಷ್ಟು ಹೆಚ್ಚಾಯಿತು. ಇದನ್ನು ಅಧಿಕೃತ ಸರ್ಕಾರಿ ದತ್ತಾಂಶದ ಪ್ರಕಾರ ತಿಳಿಸಲಾಗಿದೆ.[೩೪] WWF ನ ಹೊಸ ವರದಿಯು, ಅರಣ್ಯನಾಶದಿಂದ ಅಮೇಜಾನ್ ಮಳೆಕಾಡನ್ನು 2030 ರಷ್ಟರ ಹೊತ್ತಿಗೆ ಸಂಪೂರ್ಣವಾಗಿ ನಾಶಮಾಡುತ್ತದೆ ಅಥವಾ ತೀವ್ರವಾಗಿ ಸುಮಾರು 60 ಪ್ರತಿಶತದಷ್ಟು ನಾಶಮಾಡುತ್ತದೆ ಎಂದು ಹೇಳಿದೆ.[೩೫]
ಆದಾಗ್ಯೂ, 2009 ರ ಜನವರಿ 30 ರಂದು ನ್ಯೂ ಯಾರ್ಕ್ ಟೈಮ್ಸ್ ನ ಲೇಖನ , "ಒಂದು ಅಂದಾಜಿನ ಪ್ರಕಾರ, ಪ್ರತಿವರ್ಷ ಕಡಿದು ಹಾಕುವ ಮಳೆಕಾಡಿನ ಪ್ರತಿ ಎಕರೆಗೆ ಉಷ್ಣವಲಯದಲ್ಲಿ 50 ಎಕರೆಗಿಂತ ಹೆಚ್ಚು ಹೊಸ ಕಾಡು ಬೆಳೆಯುತ್ತದೆ..." ಹೊಸ ಕಾಡು, ಹಿಂದಿನ ಜಮೀನುಗಳಲ್ಲಿ ಹಾಗು ಮತ್ತು ಕೆಳದರ್ಜೆಯ ಕಾಡುಗಳಲ್ಲಿ ಬೆಳೆದ ದ್ವಿತೀಯ ಹಂತದ ಕಾಡನ್ನು ಒಳಗೊಂಡಿರುತ್ತದೆ.[೩೬]
2009 ರ ಸೆಪ್ಟೆಂಬರ್ ನಲ್ಲಿ ನೀಡಲಾದ ಇತ್ತೀಚಿನ ಹೊಸ ವರದಿಯಲ್ಲಿ, ಮಳೆಕಾಡುಗಳನ್ನು ಉಳಿಸಲು ಹೊಸ ಅವಕಾಶಗಳನ್ನು ಶೋಧಿಸಲಾಗುತ್ತಿದೆ ಎಂದು ತಿಳಿಸಲಾಯಿತು. ಬ್ರೆಜಿಲ್, ನಲ್ಲಿ ಪರಿಸರ ಸಚಿವ ಕಾರ್ಲೂಸ್ ಮಿಂಕ್, ಅಮೇಜಾನ್ ಕಾಡಿನ ಅರಣ್ಯನಾಶವು ಕಳೆದ ವರ್ಷ 46 ಪ್ರತಿಶತ ಕುಸಿದಿದೆ ಎಂಬುದನ್ನು ಹೆಮ್ಮೆಯಿಂದ ಪ್ರಕಟಿಸಿದರು. ಇದರ ಅರ್ಥ, ರಾಷ್ಟ್ರವು 21 ವರ್ಷಗಳಿಂದ ವಾರ್ಷಿಕ ಅಂಕಿಅಂಶವನ್ನು ಉಳಿಸಿಕೊಳ್ಳಲು ಪ್ರಾರಂಭಿಸಿದಾಗಲಿಂದ ಇದು ಅತ್ಯಂತ ಕಡಿಮೆ ಮಟ್ಟದ ಮರಕಡಿಯುವ ಪ್ರಮಾಣವಾಗಿದೆ. ಬ್ರೆಜಿಲ್ ಅರಣ್ಯನಾಶವನ್ನು ಕಡಿಮೆ ಮಾಡಿತು ಹಾಗು ಅರಣ್ಯದ ನಷ್ಟವನ್ನು ನಿಧಾನಗೊಳಿಸಿತು. ವಾರ್ಷಿಕ ಕುಸಿತವು ಈಗ 2000ಕ್ಕಿಂತ ಹೆಚ್ಚಾಗಿದೆ. ಬೇರೆ ಎಲ್ಲಾ ರಾಷ್ಟ್ರಗಳು ಕೂಡ ಅರಣ್ಯನಾಶವನ್ನು ತಡೆಯಲು ಪ್ರಯತ್ನಿಸಿವೆ. ಈಗ ವರ್ಷಕ್ಕೆ ಸುಮಾರು ಎರಡು ಸಾವಿರದಷ್ಟು ಅರಣ್ಯ ನಾಶವಾಗುತ್ತಿದೆ. ರಾಷ್ಟ್ರವು ಶ್ರೀಮಂತವಾದಂತೆ ಹಾಗು ಹೆಚ್ಚು ಕೈಗಾರಿಕೀಕರಣಕ್ಕೆ ಒಳಪಟ್ಟಂತೆ ರಾಷ್ಟ್ರದಲ್ಲಿ ಅರಣ್ಯನಾಶ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ, ರಾಷ್ಟ್ರದ ಅಭಿವೃದ್ಧಿಯಲ್ಲಿ ಅರಣ್ಯನಾಶ ಪ್ರಮುಖ ಪಾತ್ರ ವಹಿಸುವ ಹಾಗು ಅದರ ಮೂಲಕ ಲಾಭಪಡೆಯುವ ರಾಷ್ಟ್ರಗಳ ಗುಂಪಿಗೆ ವಿನಾಯಿತಿಗಳಿವೆ. ಅರಣ್ಯನಾಶವನ್ನು ನಿಲ್ಲಿಸುವುದು ಹಾಗು ದೀರ್ಘಕಾಲದವರೆಗೆ ಬೃಹತ್ ಪ್ರಮಾಣದ ಅರಣ್ಯವನ್ನು ಕಾಪಾಡುವುದು ಹೊಸ ಗುರಿಯಾಗಿದೆ. ಅಧಿಕ ಪೋಲಿಸ್ ಅಧಿಕಾರಿಗಳು ಮಳೆಕಾಡನ್ನು ಕಾಯುತ್ತಿದ್ದಾರೆ, ಹಾಗು ಮಳೆಕಾಡಿನಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಯನ್ನು ನಿಗ್ರಹಿಸುತ್ತಿದ್ದಾರೆ.[೩೭]
ಇವನ್ನೂ ಗಮನಿಸಿ
[ಬದಲಾಯಿಸಿ]- ಮಂಜು ಮುಸುಕಿನ ಕಾಡು
- ಪರಿಸರ ವಿಜ್ಞಾನ
- ಒಳನಾಡು ಮಳೆಕಾಡು
- ಸಂಪೂರ್ಣ ಅರಣ್ಯದ ಭೂದೃಶ್ಯ
- ಜಂಗಲ್(ಕಾಡು)
- ಮಳೆಕಾಡು ಪ್ರತಿಷ್ಠಾನ ನಿಧಿ
ಉಲ್ಲೇಖಗಳು
[ಬದಲಾಯಿಸಿ]- ↑ "Rainforests.net - Variables and Math". Archived from the original on 2008-12-05. Retrieved 2009-01-04.
- ↑ ರೇನ್ ಫಾರೆಸ್ಟ್ ಅಟ್ ಅನಿಮಲ್ ಸೆಂಟರ್
- ↑ ಕಿಲ್ಲರ್ ಇನ್ ಹೆಬಿಟೆಂಟ್ಸ್ ಆಫ್ ದಿ ರೇನ್ ಫಾರೆಸ್ಟ್
- ↑ ಹಾಬ್ ಗುಡ್ (2008). ಗ್ಲೋಬಲ್ ಪ್ಯಾಟ್ರನ್ ಆಫ್ ಸರ್ಫೇಸ್ ಪ್ರೆಷರ್ ಅಂಡ್ ವಿಂಡ್ . Archived 2009-03-18 ವೇಬ್ಯಾಕ್ ಮೆಷಿನ್ ನಲ್ಲಿ. ಒಹಿಹೊ ಸ್ಟೇಟ್ ಯುನಿವರ್ಸಿಟಿ. 2009-06-27ರಂದು ಪುನಃ ಸಂಪಾದಿಸಲಾಯಿತು.
- ↑ ^ ಬ್ರೂಕರ್, ವಾಲೇಸ್ S. (2006). "ಬ್ರೀಥಿಂಗ್ ಈಸಿ: ಎಟ್ ಟು, O2." ಕೊಲಂಬಿಯಾ ಯುನಿವರ್ಸಿಟಿ Columbia.edu
- ↑ ^ ಮೊರನ್, E.F., "ಡಿಫಾರೆಸ್ಟ್ರೇಷನ್ ಅಂಡ್ ಲ್ಯಾಂಡ್ ಯೂಸ್ ಇನ್ ದಿ ಬ್ರೆಜಿಲಿಯನ್ ಅಮೇಜಾನ್", ಹ್ಯೂಮನ್ ಎಕಾಲಜಿ, ಸಂಪುಟ 21, ಸಂಖ್ಯೆ. 1, 1993"
- ↑ Bourgeron, Patrick S. "Spatial Aspects of Vegetation Structure". In Frank B. Golley (ed.). Tropical Rain Forest Ecosystems. Structure and Function. Ecosystems of the World (14A ed.). Elsevier Scientific. pp. 29–47. ISBN 0444419861.
- ↑ "Sabah". Eastern Native Tree Society. Archived from the original on 2008-02-28. Retrieved 2007-11-14.
- ↑ "ಡೆಂಡ್ರೊನಾಟಿಕ್ಸ್ - ಇಂಟರ್ಡಕ್ಷನ್". Archived from the original on 2006-06-14. Retrieved 2010-10-25.
- ↑ ರೇನ್ ಫಾರೆಸ್ಟ್ ಫ್ಯಾಕ್ಟ್ಸ್
- ↑ ಇಂಪ್ಯಾಕ್ಟ್ ಆಫ್ ಡಿ ಫಾರೆಸ್ಟೇಷನ್ - ಎಕ್ಸ್ಟಿಂಗ್ಷನ್
- ↑ "Grida.no" (PDF). Archived from the original (PDF) on 2009-08-04. Retrieved 2010-10-25.
- ↑ ಲೆವಿಸ್, S.L. ,ಫಿಲಿಪ್ಸ್, O.L., ಬೇಕರ್, T.R., ಲಾಯ್ಡ್, J. ಎಟ್ ಅಲ್. 2004 “ಉಷ್ಣವಲಯದ ಕಾಡಿನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಮಾಡಲಾದ ಸತತ ಬದಲಾವಣೆಗಳು: 50 ದಕ್ಷಿಣ ಅಮೇರಿಕಾದ ದೀರ್ಘಾವದಿಯ ಭೂಮಿಗಳಿಂದ ಸಾಕ್ಷಿ” ಫಿಲ್. ಟ್ರಾನ್ಸ್. R. ಸಾಕ್. ಲಾಂಡ್. 359
- ↑ ಮ್ಯಾಲ್ಹಿ, Y ಮತ್ತು ಗ್ರೇಸ್, J. 2000 " ಟ್ರಾಪಿಕಲ್ ಫಾರೆಸ್ಟ್ಸ್ ಅಂಡ್ ಅಟ್ ಮೋಸ್ಫೆರಿಕ್ ಕಾರ್ಬನ್ ಡೈಆಕ್ಸೈಡ್”, ಮರ 15
- ↑ "Drought may turn forests into carbon producers". The Age. Melbourne. 2004-03-06.
- ↑ Metoffice.gov.uk[ಮಡಿದ ಕೊಂಡಿ]
- ↑ ೧೭.೦ ೧೭.೧ ^ ದಿ ಫ್ಯೂಚರ್ ಈಸ್ ವೈಲ್ಡ್ ಟೆಲಿವಿಷನ್ ಪ್ರೊಗ್ರಾಂ
- ↑ [17] ^ ಮಯರ್ಸ್ ಎನ್. (1985). ದಿ ಪ್ರೈಮರಿ ಸೋರ್ಸ್ . W. W. ನಾರ್ಟನ್ ಅಂಡ್ ಕಂಪನಿ, ನ್ಯೂಯಾರ್ಕ್, pp. 189-193.
- ↑ ಫೈನಲ್ ಪೇಪರ್ : ದಿ ಮೆಡಿಸಿನಲ್ ವ್ಯಾಲ್ಯೂ ಆಫ್ ದಿ ರೇನ್ ಫಾರೆಸ್ಟ್ ಮೇ 15, 2003. Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ.ಅಮ್ಯಾನ್ಡ ಹೈಡೆಟ್ ಮೇ 2003 Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಬ್ರೆಜಿಲ್ ಸೀಸ್ ಟ್ರೇಸಸ್ ಆಫ್ ಮೋರ್ ಐಸೊಲೇಟೆಡ್ ಅಮೇಜಾನ್ ಟ್ರೈಬ್ಸ್
- ↑ "BBC: ಫಸ್ಟ್ ಕಾನ್ಟ್ಯಾಕ್ಟ್ ವಿತ್ ಐಸೊಲೇಟೆಡ್ ಟ್ರೈಬ್ಸ್ ?". Archived from the original on 2008-02-06. Retrieved 2010-10-25.
- ↑ ದಿ ಟ್ರೈಬಲ್ ಪೀಪಲ್ಸ್ Archived 2012-10-20 ವೇಬ್ಯಾಕ್ ಮೆಷಿನ್ ನಲ್ಲಿ., ಥಿಂಕ್ವೇಸ್ಟ್
- ↑ ಎಂಟೈರ್ ರೇನ್ ಫಾರೆಸ್ಟ್ಸ್ ಸೆಟ್ ಟು ಡಿಸ್ ಅಪಿಯರ್ ಇನ್ ದಿ ನೆಕ್ಸ್ಟ್ ಡಿಕೆಡ್ Archived 2008-12-04 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಇಂಡಿಪೆಂಡೆಂಟ್
- ↑ ಟಾಕ್ಸ್ ಸೀಕ್ ಟು ಪ್ರಿವೆಂಟ್ ಹ್ಯೂಜ್ ಲಾಸ್ ಆಫ್ ಸ್ಪೀಸಸ್ , ನ್ಯೂಯಾರ್ಕ್ ಟೈಮ್ಸ್
- ↑ "ಲಿಟರಲ್ ರೇನ್ ಫಾರೆಸ್ಟ- ವೈ ಆಸ್ ಇಟ್ ಥ್ರೇಟೆಂಡ್?". Archived from the original on 2009-06-21. Retrieved 2010-10-25.
- ↑ ಥಾಮಸ್ ಮೆರೆಂಟ್: ಜೌಟ್ ಆಫ್ ದಿ ವುಡ್ಸ್, ದಿ ಇಂಡಿಪೆಂಡೆಂಟ್
- ↑ ಬ್ರೆಜಿಲ್: ಅಮೇಜಾನ್ ಫಾರೆಸ್ಟ್ ಡಿಸ್ಟ್ರಕ್ಷನ್ ರೇಟ್ ಹ್ಯಾಸ್ ಟ್ರಿಪಲ್ಡ್, FOXNews.com, 2008 ರ ಸೆಪ್ಟೆಂಬರ್ 29
- ↑ ಪಾಪು ನ್ಯೂ ಗಿನಿಯ ರೇನ್ ಫಾರೆಸ್ಟ್ಸ್ ಡಿಸ್ ಅಪಿಯರಿಂಗ್ ಫಾಸ್ಟರ್ ಧೆನ್ ಥಾಟ್
- ↑ "ರೇನ್ ಫಾರೆಸ್ಟ್ಸ್ ಅಂಡ್ ಅಗ್ರಿಕಲ್ಚರ್". Archived from the original on 2012-09-30. Retrieved 2010-10-25.
- ↑ ಸೈನ್ಸ್: ಸ್ಯಾಟಲೈಟ್ ಮಾನಿಟರ್ಸ್ ಮಡಗಾಸ್ಕರ್ ಷ್ರಿಕಿಂಗ್ ರೇನ್ ಫಾರೆಸ್ಟ್, 1990 ರ ಮೇ 19 , ನ್ಯೂ ಸೈಂಟಿಸ್ಟ್
- ↑ ಚೀನಾ ಈಸ್ ಬ್ಲ್ಯಾಕ್ ಹೋಲ್ ಆಫ್ ಏಷ್ಯಿಯಾಸ್ ಡಿಫಾರಸ್ಟ್ರೇಷನ್ , AsiaNews.it, 2008 ರ ಮಾರ್ಚ್ 24
- ↑ ^ ಅಮೇಜಾನ್ ಡಿಫಾರಸ್ಟ್ರೇಷನ್ ರೈಸಸ್ ಶಾರ್ಪ್ಲಿ ಇನ್ 2007, USATODAY.com, 2008 ರ ಜನವರಿ 24
- ↑ Vidal, John (20 May 2005). "Rainforest loss shocks Brazil". guardian.co.uk. London. Retrieved 7 July 2010.
- ↑ ಬ್ರೆಜಿಲ್: ಅಮೇಜಾನ್ ಡಿಫಾರಸ್ಟ್ರೇಷನ್ ವಾರ್ಸೆನ್ಸ್, Msnbc.com, 2008 ರ ಆಗಸ್ಟ್ 30
- ↑ Benjamin, Alison (6 December 2007). "More than half of Amazon will be lost by 2030, report warns". guardian.co.uk. London. Retrieved 7 July 2010.
- ↑ [149] ^ ನ್ಯೂ ಜಂಗಲ್ ಪ್ರಾಮ್ಟ್ ಅ ಡಿಬೆಟ್ ಆನ್ ರೈನ್‌ಫಾರೆಸ್ಟ್ಸ್, ದಿ ನ್ಯೂಯಾರ್ಕ್ ಟೈಮ್ಸ್, 2009 ರ ಜನವರಿ 30
- ↑ "DN.se". Archived from the original on 2009-12-20. Retrieved 2010-10-25.
ಮುಂದಿನ ಓದಿಗಾಗಿ
[ಬದಲಾಯಿಸಿ]- ಬಟ್ಲರ್, R. A. (2005) ಅ ಪ್ಲೇಸ್ ಜೌಟ್ ಆಫ್ ಟೈಮ್: ಟ್ರಾಪಿಕಲ್ ರೇನ್ ಫಾರೆಸ್ಟ್ ಅಂಡ್ ದಿ ಪೆರಿಲ್ಸ್ ದೆ ಫೇಸ್ . ಪಬ್ಲಿಷ್ಡ್ ಆನ್ ಲೈನ್: Rainforests.mongabay.com
- ರಿಚರ್ಡ್ಸ್, P. W. (1996). ದಿ ಟ್ರಾಪಿಕಲ್ ರೇನ್ ಫಾರೆಸ್ಟ್ . 2nd ed. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ISBN 0-521-42194-2
- ವೈಟ್ ಮೋರ್, T. C. (1998) ಆನ್ ಇಂಟರ್ ಡಕ್ಷನ್ ಟು ಟ್ರಾಪಿಕಲ್ ರೇನ್ ಫಾರೆಸ್ಟ್ . 2nd ed. ಆಕ್ಸ್ ಫೋರ್ಡ್ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್ 0-595-20284-5.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅನಿಮಲ್ಸ್ ಇನ್ ಅ ರೇನ್ ಫಾರೆಸ್ಟ್
- ರೇನ್ ಫಾರೆಸ್ಟ್ ಆಕ್ಷನ್ ನೆಟ್ ವರ್ಕ್
- ದಿ ಸಬಹ ಬಯೋಡೈವರ್ಸಿಟಿ ಎಕ್ಸ್ ಪೆರಿಮೆಂಟ್ ಆನ್ ರೇನ್ ಫಾರೆಸ್ಟ್ ರಿಸ್ಟೊರೇಷನ್ Archived 2019-01-20 ವೇಬ್ಯಾಕ್ ಮೆಷಿನ್ ನಲ್ಲಿ.
- ರೇನ್ ಫಾರೆಸ್ಟ್ ಪೋರ್ಟಲ್
- ದಿ ಕೋ ಅಲಿಷನ್ ಫಾರ್ ರೇನ್ ಫಾರೆಸ್ಟ್ ನೇಷನ್ಸ್ Archived 2010-11-06 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಪ್ರಿನ್ಸಸ್ ರೇನ್ ಫಾರೆಸ್ಟ್ಸ್ ಪ್ರಾಜೆಕ್ಟ್ Archived 2019-02-18 ವೇಬ್ಯಾಕ್ ಮೆಷಿನ್ ನಲ್ಲಿ.
- ಯುನೈಟೆಡ್ ನೇಷನ್ಸ್ ಫೋರಂ ಆನ್ ಫಾರೆಸ್ಟ್ಸ್
- ಡೇವ್ ಕಿಂಬಲ್ಸ್ ರೇನ್ ಫಾರೆಸ್ಟ್ ಫೋಟೊ ಕ್ಯಾಟಲಾಗ್ (ವೆಟ್ ಟ್ರಾಪಿಕ್ಸ್ ಆಸ್ಟ್ರೇಲಿಯಾ) Archived 2012-03-18 ವೇಬ್ಯಾಕ್ ಮೆಷಿನ್ ನಲ್ಲಿ.
- ರೇನ್ ಫಾರೆಸ್ಟ್ ಪ್ಲಾಂಟ್ಸ್[ಶಾಶ್ವತವಾಗಿ ಮಡಿದ ಕೊಂಡಿ]
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from January 2009
- Articles with invalid date parameter in template
- Articles with hatnote templates targeting a nonexistent page
- Commons link is on Wikidata
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2023
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಳೆಕಾಡುಗಳು
- ಪರಿಸರ
- Pages using ISBN magic links