ಸಾಧನ
ಗೋಚರ
ಸಾಧನ ಶಬ್ದವು "ಏನನ್ನಾದರೂ ಸಾಧಿಸುವ ವಿಧಾನ" ಎಂದು ಅರ್ಥಕೊಡುವ ಸಾಮೂಹಿಕ ಪದವಾಗಿದೆ. ಈ ಪದವು ಯೋಗಿಕ ಸಂಪ್ರದಾಯದಿಂದ ಬಂದಿದೆ ಮತ್ತು ಈ ವಾಸ್ತವದಲ್ಲಿ ಅವನ/ಅವಳ ಜೀವನದ ಪರಮ ಅಭಿವ್ಯಕ್ತಿಯೆಡೆಗೆ ಸಾಧಕನನ್ನು ಮುನ್ನಡೆಸುವ ಗುರಿಹೊಂದಿರುವ ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಸೂಚಿಸುತ್ತದೆ.[೧] ಇದು ವಿವಿಧ ಆಧ್ಯಾತ್ಮಿಕ ಅಥವಾ ಆಚರಣಾ ಸಂಬಂಧಿ ಉದ್ದೇಶಗಳನ್ನು ಸಾಧಿಸಲು ಅನುಸರಿಸಲಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಸಂಪ್ರದಾಯಗಳಲ್ಲಿನ ಅನೇಕ ವಿಭಾಗಗಳನ್ನು ಒಳಗೊಂಡಿದೆ.
ಸಮಕಾಲೀನ ಆಧ್ಯಾತ್ಮಿಕ ಶಿಕ್ಷಕ ಮತ್ತು ಯೋಗಿಯಾಗಿರುವ ಜಗ್ಗಿ ವಾಸುದೇವ್ ಸಾಧನವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ:[೨]
ಎಲ್ಲವೂ ಸಾಧನವಾಗಿರಬಹುದು. ನೀವು ತಿನ್ನುವ ರೀತಿ, ಕುಳಿತುಕೊಳ್ಳುವ ರೀತಿ, ನಿಂತುಕೊಳ್ಳುವ ರೀತಿ, ಉಸಿರಾಡುವ ರೀತಿ, ನಿಮ್ಮ ದೇಹ, ಮನಸ್ಸು ಮತ್ತು ಶಕ್ತಿಗಳು ಹಾಗೂ ಭಾವನೆಗಳನ್ನು ನಡೆಸಿಕೊಳ್ಳುವ ರೀತಿ – ಇದು ಸಾಧನ. ಸಾಧನವೆಂದರೆ ಯಾವುದೇ ನಿರ್ದಿಷ್ಟ ಬಗೆಯ ಚಟುವಟಿಕೆಯಲ್ಲ, ಸಾಧನವೆಂದರೆ ನೀವು ನಿಮ್ಮ ಯೋಗಕ್ಷೇಮಕ್ಕಾಗಿ ಎಲ್ಲವನ್ನೂ ಉಪಕರಣವಾಗಿ ಬಳಸಿಕೊಳ್ಳುತ್ತಿದ್ದೀರಿ ಎಂದಾಗಿದೆ. |
ಉಲ್ಲೇಖಗಳು
[ಬದಲಾಯಿಸಿ]- ↑ Flood, Gavin. An Introduction to Hinduism. Cambridge University Press: Cambridge, 1996. pp. 92, 156, 160, 167. ISBN 0-521-43878-0.
- ↑ http://isha.sadhguru.org/blog/yoga-meditation/demystifying-yoga/the-what-why-of-sadhana/