ವಿಷಯಕ್ಕೆ ಹೋಗು

ಬಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಹದ ಬಾಲ

ಬಾಲವು ಕೆಲವು ಬಗೆಗಳ ಪ್ರಾಣಿಗಳ ಹಿಂದಿನ ತುದಿಯಲ್ಲಿರುವ ಭಾಗ; ಸಾಮಾನ್ಯವಾಗಿ, ಈ ಪದವು ಮುಂಡಕ್ಕೆ ಜೋಡಣೆಗೊಂಡಿರುವ ಒಂದು ವಿಶಿಷ್ಟ, ಮೆತುವಾದ ಉಪಾಂಗವನ್ನು ಸೂಚಿಸುತ್ತದೆ. ಬಾಲಗಳು ಮುಖ್ಯವಾಗಿ ಕಶೇರುಕಗಳ ಲಕ್ಷಣವಾಗಿದ್ದರೂ, ಚೇಳುಗಳು ಹಾಗೂ ಕುಪ್ಪುತೋಕೆಗಳು ಸೇರಿದಂತೆ ಕೆಲವು ಅಕಶೇರುಕಗಳು, ಜೊತೆಗೆ ಬಸವನ ಹುಳುಗಳು ಹಾಗೂ ಗೊಂಡೆ ಹುಳಗಳು ಕೆಲವೊಮ್ಮೆ ಬಾಲಗಳು ಎಂದು ನಿರ್ದೇಶಿಸಲ್ಪಡುವ ಬಾಲದಂಥ ಉಪಾಂಗಗಳನ್ನು ಹೊಂದಿರುತ್ತವೆ.

ಕಾರ್ಯ

[ಬದಲಾಯಿಸಿ]

ಪ್ರಾಣಿಗಳು ಬಾಲಗಳನ್ನು ಅನೇಕ ರೀತಿಗಳಲ್ಲಿ ಬಳಸುತ್ತವೆ. ಮೀನುಗಳು ಮತ್ತು ಕೆಲವು ಇತರ ಕಡಲ ಜೀವಿಗಳ ಬಾಲಗಳು ಚಲನೆಯ ಮೂಲವನ್ನು ಒದಗಿಸುತ್ತವೆ.[] ಅನೇಕ ಭೂಪ್ರಾಣಿಗಳು ನೊಣಗಳು ಮತ್ತು ಇತರ ಕಚ್ಚುವ ಕೀಟಗಳನ್ನು ದೂರ ಓಡಿಸಲು ತಮ್ಮ ಬಾಲಗಳನ್ನು ಬಳಸುತ್ತವೆ. ಬೆಕ್ಕುಗಳು ಮತ್ತು ಕಾಂಗರೂಗಳು ಸೇರಿದಂತೆ ಕೆಲವು ಪ್ರಜಾತಿಗಳು, ತಮ್ಮ ಬಾಲಗಳನ್ನು ಸಮತೋಲನಕ್ಕಾಗಿ ಬಳಸುತ್ತವೆ; ಮತ್ತು ನ್ಯೂ ವಲ್ಡ್ ಕೋತಿಗಳು ಹಾಗೂ ಅಪಾಸಮ್‍ಗಳಂತಹ ಕೆಲವು ಪ್ರಾಣಿಗಳು, ಹಿಡಿಯುವ ಶಕ್ತಿಯುಳ್ಳ ಬಾಲಗಳನ್ನು ಹೊಂದಿರುತ್ತವೆ. ಇದರಿಂದ ಅವು ಮರಗಳ ಕೊಂಬೆಗಳನ್ನು ಬಾಲದಿಂದ ಹಿಡಿಯಲು ಸಾಧ್ಯವಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Robert W. Blake (26 May 1983). Fish Locomotion. CUP Archive. p. 143. ISBN 978-0-521-24303-2.


"https://kn.wikipedia.org/w/index.php?title=ಬಾಲ&oldid=1251510" ಇಂದ ಪಡೆಯಲ್ಪಟ್ಟಿದೆ