Appu ASG

Appu ASG

Favorite films

Don’t forget to select your favorite films!

Recent activity

All
  • MAX

  • Girls Will Be Girls

  • Amaran

  • Pushpa 2 - The Rule

Recent reviews

More
  • Bheema

    Bheema

    ನಮಗೆ ಗೊತ್ತಿರುವ ಜಗತ್ತಿನೊಳಗಿನ ಬದುಕುಗಳ ಕಥೆಯನ್ನ ಸಿನಿಮಾದೊಳಗೆ ಹೇಳಲು ಮನಸ್ಸು ಮಾಡುವುದು ಯಾವಾಗಲೂ ಒಬ್ಬ ನಿರ್ದೇಶಕನಿಗೆ ಮೊದಲನೇ ಪ್ಲಸ್ ಆಗುತ್ತದೆ ಎಂಬುದು ನನ್ನ ನಂಬಿಕೆ. ಅದು ನಮ್ಮ ಚಿತ್ರದೊಳಗೆ ಕಾಣುವ ಸಣ್ಣಪುಟ್ಟ ವಿಷಯಗಳನ್ನೂ ಪ್ರೇಕ್ಷಕರು ಗಮನಿಸುವಂತೆ ಮಾಡುತ್ತದೆ. ತಾನೇ ಸುತ್ತಿದ ಬೀದಿಗಳು, ಕಂಡಿರುವ ಬದುಕುಗಳು, ಘಟನೆಗಳು ಚಿತ್ರಣವಾಗುವಾಗ ನಮ್ಮ ಸರಿ ತಪ್ಪುಗಳು ನಮಗೇ ಮೊದಲು ಕಾಣುತ್ತಿರುತ್ತವೆ ಹಾಗಾಗಿ ನಮಗೆ ಗೊತ್ತಿರುವ ಜಗತ್ತು ನಮ್ಮ ಕಥೆಯೊಳಗೆ ಚಿತ್ರಿತವಾಗುವುದು ಯಾವತ್ತಿಗೂ ಪ್ಲಸ್.

    ಭೀಮ ಅದೇ ರೀತಿಯಾಗಿ ನಟ, ನಿರ್ದೇಶಕ ವಿಜಯ್ ಕುಮಾರ್ ಅವರು ಕಂಡ ಒಂದಿಷ್ಟು ಬದುಕುಗಳೊಳಗಿಂದ ಬಂದ ಕಥೆಯಾಗಿ, ಅವರು ಸೃಷ್ಟಿಸಿರುವ ಜಗತ್ತಿನೊಳಗೆ ಬೆರೆತು ಆ ಜಗತ್ತಿನ ದಿನನಿತ್ಯದ ವೇಗದ ರಿದಂನಂತೆಯೇ ಚಿತ್ರವಾಗಿಯೂ ಪಟಪಟನೆ ಸಾಗುವಾಗ ಶಿಳ್ಳೆ, ಚಪ್ಪಾಳೆ, ಕೇಕೆ, ಕಣ್ಣೀರುಗಳು ಅದೇ ರಿದಂನಲ್ಲಿಯೇ…

  • Maharaja

    Maharaja

    ★★★★½

    In his 50th film, VJS returns with a bang! 💥♥️

    The crime emotional drama 'Maharaja,' written and directed by @Nithilan Swaminathan, is set to impress with its brilliant non-linear narrative and impactful presentation.

    VJS's performance as Maharaja is memorable and supported by strong acting from the rest of the cast. Ajaneesh Loknath 's music enhances the film's key moments.

    Don't miss this film ♥️♥️♥️

Popular reviews

More
  • Duniya

    Duniya

    ★★★★★

    ಯಾಕೋ ನೆನಪಾಗಿ ಮತ್ತೆ 'ದುನಿಯಾ' ನೋಡ್ದೆ. ಸೂರಿ ಸರ್ ಮೇಲಿದ್ದಿದ್ ಮರ್ಯಾದೆ Double ಆಗೋಯ್ತು. ಮೊದಲನೇ ಸಲ ಕಾಲೇಜಲ್ಲಿದ್ದಾಗ ಹಾಸನ ಶ್ರೀಗುರು ಥಿಯೇಟ್ರಲ್ ಕೊಟ್ಟಿದ್ ಕಿಕ್ಕೇ ಇವಾಗ್ಲೂ ಸಿಕ್ತು. ಶಿವು, ಪೂರ್ಣಿ, ಸತ್ಯಣ್ಣ, ಲೂಸ್ ಮಾದ, ಎಸಿಪಿ ಉಮೇಶ್ ಪಾತ್ರಗಳು ಈಗ್ಲೂ ಅಷ್ಟೇ ಇಷ್ಟಾಗ್ತವೆ. ಬಾಸ್ ನೀವ್ ಟ್ರ್ಯಾಕಿಗ್ ಬಂದ್ರೆ ಇನ್ನೊಂದಿಷ್ಟ್ ಒಳ್ಳೆ ಸಿನಿಮಾನ ಕೊಟ್ಟೇ ಕೊಡ್ತಿರ ಅನ್ನೋ ನಂಬಿಕೆ ಇದೆ. ಆದಷ್ಟ್ ಬೇಗ ಹೊಸುಬ್ರುನ್ನ ಹಾಕೊಂಡು ಮನ್ಸಿಗ್ ಅನ್ಸಿದ್ ತರ ಸಿನಿಮಾ ಮಾಡಿ ಬಾಸ್.

    ಮುಂದಿನ್ ತಿಂಗ್ಳು ಇಪ್ಪತ್ಮೂರಕ್ಕೆ ಹದಿನಾರ್ ವರ್ಷ ಆಗುತ್ತೆ ಸಿನಿಮಾ ಬಂದು, ಇನ್ನು ಐವತ್ ವರ್ಷ ಹೋದ್ರು ದುನಿಯಾ ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುತ್ತೆ.
    Masterpiece ❤

  • Daredevil Musthafa

    Daredevil Musthafa

    ★★★

    ಮನರಂಜನೆ ವಿಷಯದಲ್ಲಿ ಶಶಾಂಕ್ ಕಿಂಚಿತ್ತೂ ಮೋಸ ಮಾಡದೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾರೆ. ಚಿತ್ರದ ಅಷ್ಟೂ ಪಾತ್ರಗಳು ಜಿದ್ದಿಗೆ ಬಿದ್ದಂತೆ ನಟಿಸುವ ಮೂಲಕ ಅಬಚೂರಿನ ಕಾಲೇಜಿನಂಗಳಕ್ಕೆ ನಮ್ಮನ್ನು ತಮ್ಮ ಜೊತೆಗೆ ಕೊಂಡೊಯ್ದು ತಮ್ಮ ಕಥೆಯನ್ನು ನಮ್ಮದೇ ಕಥೆ ಎಂಬಂತೆ ಮುಟ್ಟಿಸುತ್ತ ಹೋಗಿರುವುದು ಈ ಚಿತ್ರದ ವಿಶೇಷ.

    ಯಾವುದೋ ಒಂದು ವಿಭಾಗಕ್ಕೆ ಹೊಗಳಿಕೆ ಸಂದರೆ ಅದು ಆ ಚಿತ್ರದ ಸೋಲೆಂದು ನಂಬಿರುವ ನನಗೆ ಈ ಚಿತ್ರ ಆ ರೀತಿಯಾದ ಅಭಿಪ್ರಾಯಕ್ಕೆ ಕಿಂಚಿತ್ತೂ ಅನುವು ಮಾಡಿಕೊಡದೆ ಎಲ್ಲಾ ವಿಭಾಗಗಳಲ್ಲಿಯೂ ಖುಷಿ ನೀಡಿತು.
    ಚಿತ್ರದ ಅವಧಿ ನೋಡಿ ಗೊಂದಲಗೊಳ್ಳದೆ ನಿಮ್ಮ ಮೂರು ಗಂಟೆಗಳನ್ನ ಈ ಚಿತ್ರಕ್ಕೆ ನೀಡಿ. ಇದು ನಿಮ್ಮನ್ನು ಖಂಡಿತವಾಗಿಯೂ ರಂಜಿಸಿ ಕೊನೆಗೊಂದಿಷ್ಟು ಕಣ್ಣಂಚನ್ನು ಜಿನುಗಿಸಿ ಪ್ರೀತಿ ತುಂಬಿ ಮನೆಗೆ ಕಳುಹಿಸುತ್ತದೆ.

    ಅಯ್ಯಂಗಾರಿ ಪಾತ್ರಕ್ಕೆ ಚಿತ್ರದಲ್ಲಿ…

Following

10